Select Your Language

Notifications

webdunia
webdunia
webdunia
webdunia

ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಾನಿರಲ್ಲ: ಶಾಕ್ ಕೊಟ್ಟ ನಟಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಾನಿರಲ್ಲ: ಶಾಕ್ ಕೊಟ್ಟ ನಟಿ ಮೇಘಾ ಶೆಟ್ಟಿ
ಬೆಂಗಳೂರು , ಶುಕ್ರವಾರ, 11 ಮಾರ್ಚ್ 2022 (11:00 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ನಟಿ ಮೇಘಾ ಶೆಟ್ಟಿಗೆ ಈಗ ಸ್ಯಾಂಡಲ್ ವುಡ್ ನಲ್ಲೂ ಬೇಡಿಕೆ ಬಂದಿದೆ. ಈ ನಟಿ ಇದೀಗ ಕೆಲವು ದಿನ ನಾನು ಧಾರವಾಹಿಯಿರಲಿಲ್ಲ ಎಂದು ಶಾಕ್ ಕೊಟ್ಟಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಮನಗೆದ್ದಿರುವ ಮೇಘಾ ಶೆಟ್ಟಿ ಇನ್ನು ಕೆಲವು ದಿನಗಳ ಕಾಲ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲ್ಲ. ನನ್ನನ್ನು ಮರೆಯಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಈಗ ಮಹತ್ವದ ತಿರುವು ಸಿಕ್ಕಿದ್ದು, ರಾಜನಂದಿನಿ ಅಧ್ಯಾಯ ಶುರುವಾಗಿದೆ. ರಾಜನಂದಿನಿಯಾಗಿ ಸ್ಯಾಂಡಲ್ ವುಡ್ ನಟಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಫ್ಲ್ಯಾಶ್ ಬ್ಯಾಕ್‍ ಕತೆ ನಡೆಯುತ್ತಿದೆ. ಹೀಗಾಗಿ ಕೆಲವು ದಿನಗಳವರೆಗೆ ಅನು ಸಿರಿಮನೆ ಪಾತ್ರವಿರಲ್ಲ. ಇದೇ ಕಾರಣಕ್ಕೆ ಮೇಘಾ ಧಾರವಾಹಿಯಲ್ಲಿ ಕೆಲವು ದಿನ ಕಾಣಿಸಿಕೊಳ್ಳುತ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಗಾಗಿ ಥಿಯೇಟರ್ ನಲ್ಲಿ ಸೀಟ್ ರಿಸರ್ವ್!