Publish Date: Tue, 15 Feb 2022 (08:50 IST)
Updated Date: Tue, 15 Feb 2022 (09:22 IST)
ಬೆಂಗಳೂರು: ಕನ್ನಡತಿ ಧಾರವಾಹಿ ಮೂಲಕ ಮನೆ ಮನೆಗೆ ಚಿರಪರಿಚಿತರಾಗಿರುವ ನಟ ಕಿರಣ್ ರಾಜ್ ಕೊರೋನಾ ಸಮಯದಲ್ಲಿ ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕೊರೋನಾ ಸಮಯದಲ್ಲಿ ತಮ್ಮ ಫೌಂಡೇಷನ್ ನೆರವಿನಿಂದ ಅನೇಕರಿಗೆ ಕಿರಣ್ ಸಹಾಯ ಹಸ್ತ ಚಾಚಿದ್ದರು. ಈಗಲೂ ಅವರು ತಮ್ಮ ಸಹಾಯ ಮಾಡುವ ಗುಣ ಬಿಟ್ಟಿಲ್ಲ.
ಇದೀಗ ಮಂಗಳಮುಖಿಯರಿಗೆ ಹೊದಿಕೆ ವಿತರಿಸಿ ಅವರ ಜೊತೆಗೆ ಕಾಲ ಕಳೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು, ತಮಗೆ ಸಹಾಯ ಮಾಡಿದ ನಟನಿಗೆ ಮಂಗಳಮುಖಿಯರು ಹಾರೈಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.