Publish Date: Fri, 18 Feb 2022 (10:10 IST)
Updated Date: Fri, 18 Feb 2022 (10:11 IST)
ಬೆಂಗಳೂರು: ನಟಿ ರಚಿತಾ ರಾಂ ಸದ್ಯದಲ್ಲೇ ಕಿಡ್ನ್ಯಾಪ್ ಆಗಲಿದ್ದಾರೆ. ಈ ಮೊದಲು ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್ ವಿಚಾರ ವೈರಲ್ ಆಗಿತ್ತು. ಈಗ ಡಿಂಪಲ್ ಕ್ವೀನ್ ಸರದಿ.
ಇಷ್ಟೆಲ್ಲಾ ನಡೆಯುತ್ತಿರುವುದು ಜನಪ್ರಿಯ ಶೋ ಡ್ರಾಮಾ ಜ್ಯೂನಿಯರ್ಸ್ ಹೊಸ ಸೀಸನ್ ಗಾಗಿ. ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ಸ್ ಶೋನ ತೀರ್ಪುಗಾರರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳಲಿರುವುದು ಈಗಾಗಲೇ ಪ್ರೋಮೋ ಮೂಲಕ ಬಹಿರಂಗವಾಗಿದೆ.
ಇದೀಗ ರವಿಚಂದ್ರನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಂ ಕೂಡಾ ಸೇರಿಕೊಳ್ಳಲಿದ್ದಾರೆ. ರವಿಚಂದ್ರನ್ ರೀತಿಯಲ್ಲೇ ರಚಿತಾ ರಾಂ ಪಾಲ್ಗೊಂಡಿರುವ ಪ್ರೋಮೋದ ಚಿತ್ರೀಕರಣ ಈಗಾಗಲೇ ನಡೆದಿದ್ದು, ಸದ್ಯದಲ್ಲೇ ಪ್ರಸಾರವಾಗಲಿದೆ. ವಿಶೇಷವೆಂದರೆ ರಚಿತಾ ಮೊದಲು ಬಣ್ಣ ಹಚ್ಚಿದ್ದು, ಜೀ ವಾಹಿನಿ ಮೂಲಕ. ಅರಸಿ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈಗ 10 ವರ್ಷದ ಬಳಿಕ ಮತ್ತೆ ಜೀ ಕನ್ನಡ ವಾಹಿನಿಗೆ ಮರಳಲಿದ್ದಾರೆ.