Select Your Language

Notifications

webdunia
webdunia
webdunia
webdunia

ಅನ್ ಲಾಕ್ 5: ಸಿನಿಮಾ ಮಂದಿಗೆ ಸಿಹಿ ಸುದ್ದಿ?

ಅನ್ ಲಾಕ್ 5: ಸಿನಿಮಾ ಮಂದಿಗೆ ಸಿಹಿ ಸುದ್ದಿ?
ನವದೆಹಲಿ , ಮಂಗಳವಾರ, 29 ಸೆಪ್ಟಂಬರ್ 2020 (11:36 IST)
ನವದೆಹಲಿ: ಇಂದಿನಿಂದ ದೇಶದಲ್ಲಿ ಅನ್ ಲಾಕ್ 5 ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರ ಇನ್ನಷ್ಟು ವಿನಾಯಿತಿ ನೀಡುವ ಸಾಧ್ಯತೆಯಿದೆ.


ಈ ಬಾರಿಯಾದರೂ ಚಿತ್ರಮಂದಿರ ತೆರೆಯಲು ಅನುಮತಿ ಸಿಗಬಹುದಾ ಎಂಬ ಆಶಾವಾದದಲ್ಲಿ ಸಿನಿಮಾ ರಂಗವಿದೆ. ಈಗಾಗಲೇ ಉಳಿದೆಲ್ಲಾ ಸಿನಿಮಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಚಿತ್ರಮಂದಿರ ತೆರೆಯಲು ಅವಕಾಶ ನೀಡದೇ ಇರುವ ಕಾರಣ ಹಲವರು ಶೂಟಿಂಗ್ ಮಾಡಲೂ ಹಿಂದೆ ಮುಂದೆ ನೋಡುತ್ತಿದ್ದರೆ, ಮತ್ತೆ ಕೆಲವರು ಸಿನಿಮಾ ರಿಲೀಸ್ ಗಾಗಿ ಕಾದು ಕುಳಿತಿದ್ದಾರೆ. ಸಿನಿಮಾ ರಂಗದ ಆರ್ಥಿಕ ಸ್ಥಿತಿ ಮತ್ತೆ ಹಳಿಗೆ ಬರಬೇಕೆಂದರೆ ಸಿನಿಮಾ ಮಂದಿರ ತೆರೆಯುವುದು ಅನಿವಾರ್ಯ. ಪಶ್ಚಿಮ ಬಂಗಾಲ ಸರ್ಕಾರ ಈಗಾಗಲೇ ತನ್ನ ರಾಜ್ಯದಲ್ಲಿ ಥಿಯೇಟ್ ತೆರೆಯಲು ಅವಕಾಶ ನೀಡಿದೆ. ಆದರೆ ಕೇಂದ್ರ ಈಗ ಯಾವ ನಿರ್ದೇಶನ ನೀಡುತ್ತದೆ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ಸಂಜನಾ ಗಲ್ರಾನಿ ಆಪ್ತ ಜೊಯೇಬ್ ಸಿಸಿಬಿ ವಶಕ್ಕೆ