Publish Date: Mon, 28 Sep 2020 (11:44 IST)
Updated Date: Mon, 28 Sep 2020 (11:45 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲಾಕ್ ಡೌನ್ ನಲ್ಲಿ ಗಡ್ಡ ಬೆಳೆಸಿಕೊಂಡು ಹೊಸ ಲುಕ್ ನಲ್ಲಿ ಮಿಂಚಿದ್ದರು. ಈಗಲೂ ಪುನೀತ್ ದಾಡಿ ಬಿಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಪುನೀತ್ ದಾಡಿ ಬೆಳೆಸಿರುವುದು ಯಾಕೆ ಗೊತ್ತಾ?
ಪುನೀತ್ ಅಭಿನಯದ ಯುವರತ್ನ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಇನ್ನು, ಇದಾದ ಬಳಿಕ ಪುನೀತ್ ಜೇಮ್ಸ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಅದು ಪವರ್ ಸ್ಟಾರ್ ಸೂಪರ್ ಹಿಟ್ ಮೂವಿ ‘ಜಾಕಿ’ ಸಿನಿಮಾ ಬಿಡುಗಡೆಯಾಗಿ 10 ನೇ ವರ್ಷದ ವಾರ್ಷಿಕೋತ್ಸವದ ದಿನ ಅಂದರೆ ಅಕ್ಟೋಬರ್ 13 ರಿಂದ ಆರಂಭವಾಗಲಿದೆ. ಈ ಸಿನಿಮಾದಲ್ಲಿ ಪುನೀತ್ ದಾಡಿ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ಪುನೀತ್ ದಾಡಿ ಬಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.