Publish Date: Mon, 28 Sep 2020 (09:25 IST)
Updated Date: Mon, 28 Sep 2020 (09:28 IST)
ಬೆಂಗಳೂರು: ಕೊರೋನಾದಿಂದಾಗಿ ಸಾವನ್ನಪ್ಪಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನಟ, ಬಿಜೆಪಿ ನಾಯಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಕೊರೋನಾ ರೋಗಿಗಳ ಶವಸಂಸ್ಕಾರ ಮಾಡುವ ರೀತಿಯಲ್ಲೇ ಸಚಿವರ ಅಂತ್ಯಕ್ರಿಯೆಯೂ ನಡೆದಿದೆ. ಪಿಪಿಇ ಕಿಟ್ ಧರಿಸಿದ ಕಾರ್ಯಕರ್ತರು ಅವರ ದೇಹವನ್ನು ಹಗ್ಗದ ಸಹಾಯದಿಂದ ಗುಂಡಿಯೊಳಗೆ ಇಳಿಸುವಾಗ ಅದು ಆಯತಪ್ಪಿ ತಲೆಕೆಳಗಾಗಿ ಬಿದ್ದಿದೆ. ಈ ದೃಶ್ಯ ನೋಡಿ ಜಗ್ಗೇಶ್ ಹಣ, ಅಧಿಕಾರ ಯಾವುದಕ್ಕೂ ಬೆಲೆಯಿಲ್ಲ ಎಂಬುದನ್ನು ಈ ಒಂದು ರೋಗ ನಿರೂಪಿಸಿಬಿಟ್ಟಿತು ಎಂದು ಮರುಕ ವ್ಯಕ್ತಪಡಿಸಿದ್ದಾರೆ.