Select Your Language

Notifications

webdunia
webdunia
webdunia
Wednesday, 9 April 2025
webdunia

ಡ್ರಗ್ಸ್ ದಂಧೆಯಲ್ಲಿರುವವರ ಹೆಸರುಗಳನ್ನು ನನಗೆ ದುನಿಯಾ ವಿಜಿ ಹೇಳಿದ್ದಾನೆ ಎಂದ ಜಗ್ಗೇಶ್

ದುನಿಯಾ ವಿಜಯ್
ಬೆಂಗಳೂರು , ಸೋಮವಾರ, 21 ಸೆಪ್ಟಂಬರ್ 2020 (09:36 IST)
ಬೆಂಗಳೂರು: ಒಂದೆಡೆ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ನ ಡ್ರಗ್ ಮಾಫಿಯಾದ ಜನ್ಮ ಜಾಲಾಡುತ್ತಿದ್ದರೆ, ಇತ್ತ ನವರಸನಾಯಕ ಜಗ್ಗೇಶ್ ನೀಡಿರುವ ಹೇಳಿಕೆಯೊಂದು ಕುತೂಹಲ ಮೂಡಿಸಿದೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ದುನಿಯಾ ವಿಜಯ್ ತಮ್ಮ ಬಳಿ ಹೇಳಿಕೊಂಡಿದ್ದ ವಿಚಾರಗಳನ್ನು ಜಗ್ಗೇಶ‍್ ಹಂಚಿಕೊಂಡಿದ್ದಾರೆ. ‘ನಾನು ಕಪ್ಪು ಚರ್ಮದವನು ಎಂಬ ಕಾರಣಕ್ಕೆ ಡ್ರಗ್ಸ್ ನಂತಹ ಕೆಟ್ಟ ಕೆಲಸ ಮಾಡುತ್ತೇನೆ ಎಂದು ಕೆಲವರು ವಿನಾಕಾರಣ ಆಪಾದನೆ ಮಾಡುತ್ತಿದ್ದಾರೆ. ಆದರೆ ಅವರ ಬಿಳಿ ಬಣ್ಣಕ್ಕೆ ಸಮಾಜ ಅವರನ್ನು ನಂಬಿ ಬಿಡುತ್ತದೆ ಎಂದ. ಅದಕ್ಕೆ ನಾನು ಉದಾಹರಣೆ ಕೇಳಿದಾಗ ಡ್ರಗ್ಸ್ ದಂಧೆಯಲ್ಲಿರುವ ಮಹಾಮಹಿರ ಹೆಸರು ಹೇಳಿದ. ಕೇಳಿ ಉತ್ತರವಿಲ್ಲದೆ ಕೆಲವು ಕಾಲ ಮೌನವಾಗಿ ನನ್ನ ಮೈ ಚರ್ಮ ನೋಡಿಕೊಂಡೆ. ನಾನು ವಿಜಿಗಿಂತ ಕಪ್ಪು. ನಮ್ಮ ರಂಗದಲ್ಲಿ ಬಿಳಿ ಬಣ್ಣದವರಿಗೇ ಹೆಚ್ಚು ಮಾನ್ಯತೆ ಎಂದು ಬೇಸರಿಸಿಕೊಂಡೆ’ ಎಂದು ಜಗ್ಗೇಶ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಆದರೆ ದುನಿಯಾ ವಿಜಿ ಹೇಳಿದಂತೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ಹೆಸರುಗಳು ಯಾರು ಎಂದು ಬಹಿರಂಗಪಡಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿವಾದಾತ್ಮಕ ಕಾಮೆಂಟ್: ಸಂಜಯ್ ಮಂಜ್ರೇಕರ್ ಗೆ ತಪರಾಕಿ ನೀಡಿದ ಟ್ವಿಟರಿಗರು