Publish Date: Mon, 21 Sep 2020 (06:23 IST)
Updated Date: Mon, 21 Sep 2020 (06:24 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಶನಿವಾರ ನ್ಯಾಯಾಲಯ ಇಬ್ಬರು ನಟಿಯರು ಮತ್ತು ಇನ್ನೊಬ್ಬ ಆರೋಪಿ ಶಿವಪ್ರಕಾಶ್ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಿತ್ತು. ಸದ್ಯಕ್ಕೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇವರ ಬಂಧನ ಅವಧಿ ವಿಸ್ತಾರವಾಗುತ್ತದೋ ಇಲ್ಲವೇ ಜಾಮೀನು ಸಿಗುತ್ತದೋ ಎಂದು ಇಂದು ತೀರ್ಪು ಹೊರಬೀಳಲಿದೆ.