Select Your Language

Notifications

webdunia
webdunia
webdunia
webdunia

ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ತಿರಸ್ಕರಿಸಿದ ನ್ಯಾಯಾಲಯ

ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ತಿರಸ್ಕರಿಸಿದ ನ್ಯಾಯಾಲಯ
ಬೆಂಗಳೂರು , ಸೋಮವಾರ, 28 ಸೆಪ್ಟಂಬರ್ 2020 (16:20 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಜಾಮೀನು ಅರ್ಜಿಯನ್ನು ಎನ್ ಡಿಪಿಎಸ್ ಕೋರ್ಟ್ ತಿರಸ್ಕರಿಸಿದೆ.


ಈ ಇಬ್ಬರೂ ನಟಿಯರಿಗೆ ಜಾಮೀನು ನೀಡಿ ಹೊರಬಿಟ್ಟರೆ ಮತ್ತೆ ಅದೇ ಕೃತ್ಯ ಮುಂದುವರಿಸಬಹುದು ಎಂದು ಸಿಸಿಬಿ ಪರ ವಕೀಲರು ವಾದಿಸಿದ್ದರು. ಇದೀಗ ಎನ್ ಡಿಪಿಎಸ್ ನ್ಯಾಯಾಲಯ ಜಾಮೀನು ತಿರಸ್ಕರಿದ ಹಿನ್ನಲೆಯಲ್ಲಿ ನಟಿಯರ ಪರ ವಕೀಲರು ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ರಾಗಿಣಿ, ಸಂಜನಾರ ಆಪ್ತರಿಗೂ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದೆ. ಹೀಗಾಗಿ ಡ್ರಗ್ ಆರೋಪಿಗಳಿಗೆ ಜೈಲೇ ಗತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಲವ್ ಬರ್ಡ್ಸ್ ಹಾಟ್ ಫೋಟೋ ವೈರಲ್