Publish Date: Mon, 28 Sep 2020 (16:26 IST)
Updated Date: Mon, 28 Sep 2020 (16:27 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಡಿಪಿಎಸ್ ಕೋರ್ಟ್ ನಟಿಯರಾದ ರಾಗಿಣಿ, ಸಂಜನಾಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಅವರಿಗೆ ಮತ್ತೊಂದು ಶಾಕ್ ಕಾದಿದೆ.
ಕೊರೋನಾ ಕಾರಣದಿಂದಾಗಿ ಅವರಿಗೆ ಜೈಲ್ ನಲ್ಲಿ ಎರಡನೇ ಹಂತದ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಇನ್ನು 10 ದಿನ ಅವರು ತಮ್ಮ ಸೆಲ್ ನಿಂದ ಹೊರಬರುವಂತಿಲ್ಲ. ಈಗ ಇಬ್ಬರೂ ನಟಿಯರನ್ನು ಬೇರೊಂದು ಸೆಲ್ ಗೆ ವರ್ಗಾಯಿಸಲಾಗಿದೆ. ಜಾಮೀನು ತಿರಸ್ಕಾರವಾದ ಸುದ್ದಿ ಬೆನ್ನಲ್ಲೇ ಇಬ್ಬರೂ ತೀವ್ರ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ.