ಬೆಂಗಳೂರು: ಉಪೇಂದ್ರ ಸಿನಿಮಾ ಎಂದರೆ ಹಾಗೇನೇ. ಎಲ್ಲವೂ ಡಿಫರೆಂಟ್ ಆಗಿಯೇ ಇರುತ್ತದೆ. ಪ್ರೇಕ್ಷಕರ ತಲೆಗೆ ಹುಳ ಬಿಡೋದರಲ್ಲಿ ಉಪ್ಪಿ ನಿಸ್ಸೀಮ. ಇಂದು ರಿಲೀಸ್ ಆಗಿರುವ ಯುಐ ಸಿನಿಮಾವೂ ಅದೇ ರೀತಿಯಿದೆ.
ಯುಐ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು ಮೊದಲ ಶೋ ನೋಡಿದ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಪಕ್ಕಾ ಉಪ್ಪಿ ಶೈಲಿಯ ಸಿನಿಮಾ ಇದಾಗಿದ್ದು, ಇದೊಂದು ಮಾಸ್ಟರ್ ಪೀಸ್ ಬಿಡಿ ಎಂದು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ.
ಆದರೆ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಆರಂಭದಲ್ಲೇ ಉಪ್ಪಿ ಶಾಕ್ ಕೊಟ್ಟಿದ್ದಾರೆ. ಟೈಟಲ್ ಕಾರ್ಡ್ ಬರುವ ಮೊದಲೇ ನೀವು ಬುದ್ಧಿವಂತರಾಗಿದ್ದರೆ ಈಗಲೇ ಚಿತ್ರಮಂದಿರದಿಮದ ಎದ್ದು ಹೋಗಿ. ನೀವು ದಡ್ಡರಾಗಿದ್ದರೆ ಈ ಚಿತ್ರವನ್ನು ಪೂರ್ತಿಯಾಗಿ ನೋಡಿ ಎಂದು ಸಂದೇಶ ಕೊಟ್ಟಿದ್ದಾರೆ.
ಸಿನಿಮಾ ನೋಡಲು ಬರುವ ಪ್ರೇಕ್ಷಕರು ಹೀಗೆ ಹೇಳುವ ಧೈರ್ಯವಿರಬೇಕು ಎಂದರೆ ಅದು ಉಪೇಂದ್ರಗೆ ಮಾತ್ರ ಎಂದು ಪ್ರೇಕ್ಷಕರು ಹೇಳಿದ್ದಾರೆ. ಆರಂಭದಲ್ಲೇ ಉಪ್ಪಿ ಪ್ರೇಕ್ಷಕರ ತಲೆಗೆ ಈ ಮೂಲಕ ಹುಳ ಬಿಡುತ್ತಾರೆ. ಟೈಟಲ್ ಕಾರ್ಡ್ ನ್ನೇ ವಿಭಿನ್ನವಾಗಿ ಹಾಕಲಾಗಿದೆ. ಕ್ಯಾಮರಾ, ಲೈಟ್ಸ್ ಜೊತೆಗೆ ಮೆದುಳು ಇರುವ ವಿಶಿಷ್ಟ ಟೈಟಲ್ ಕಾರ್ಡ್ ನ್ನು ತೋರಿಸಲಾಗುತ್ತದೆ. ಇಡೀ ಸಿನಿಮಾದಲ್ಲೇ ಉಪೇಂದ್ರ ಆವರಿಸಿದ್ದಾರೆ. ಉಪೇಂದ್ರ ನನ್ನೊಳಗಿನ ನಾನು ಮತ್ತೊ ಹೊರಗೆ ಇರುವ ನಾನು ಎನ್ನುವ ಎರಡು ಕ್ಯಾರೆಕ್ಟರ್ ಮಾಡುತ್ತಾರೆ. ಈ ಸಿನಿಮಾದಲ್ಲಿ ನನ್ನೊಳಗಿನ ನಾನು ಗೆಲ್ಲುತ್ತೇವಾ, ಹೊರಗೆ ಕಾಣುವ ನಾನು ಗೆಲ್ಲುತ್ತೇವಾ ಎನ್ನುವುದೇ ಸಿನಿಮಾದ ಕತೆಯಾಗಿದೆ.