Select Your Language

Notifications

webdunia
webdunia
webdunia
webdunia

ಯುಐ ಅಪ್ ಡೇಟ್ ಬಗ್ಗೆ ಪೋಸ್ಟರ್ ನಲ್ಲೇ ಸುಳಿವು ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ

UI

Krishnaveni K

ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2024 (09:54 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡುತ್ತಿರುವ ಯುಐ ಸಿನಿಮಾದ ಬಿಗ್ ಅಪ್ ಡೇಟ್ ಒಂದು ಇಂದು ಅಭಿಮಾನಿಗಳಿಗೆ ಸಿಗಲಿದೆ. ಇದರ ಬಗ್ಗೆ ಉಪೇಂದ್ರ ಈಗಾಗಲೇ ಅಭಿಮಾನಿಗಳಿಗೆ ಕ್ಲೂ ಕೊಟ್ಟಿದ್ದಾರೆ.

ಯುಐ ಸಿನಿಮಾದ ಅಪ್ ಡೇಟ್ ಅಕ್ಟೋಬರ್ 14 ಕ್ಕೆ ರಿವೀಲ್ ಆಗಲಿದೆ ಎಂದು ಉಪೇಂದ್ರ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಗುರಿಯಿಡಲು ಮುಂದಾಗಿರುವ ಬಾಣದ ಚಿತ್ರವಿದೆ. ಇನ್ನೊಂದೆಡೆ ‘ಮೆಗಾ’ ಅಪ್ ಡೇಟ್ ಎಂದು ನೀಡಲಾಗಿದೆ. ಹೀಗಾಗಿ ಈ ಅಪ್ ಡೇಟ್ ಏನಿರಬಹುದು ಎಂಬ ಸುಳಿವು ಸಿಕ್ಕಿದೆ.

ಇಂದು ಬೆಳಿಗ್ಗೆ 11.07 ಕ್ಕೆ ಅಪ್ ಡೇಟ್ ಸಿಗಲಿದ್ದು, ಇದು ಸಿನಿಮಾ ಬಿಡುಗಡೆ ಕುರಿತಾಗಿಯೇ ಇರಬಹುದು ಎಂದು ಅಭಿಮಾನಿಗಳು ಉಹಿಸಿದ್ದಾರೆ. ಬಾಣ ಗುರಿಯಿಟ್ಟಿರುವುದು ರಿಲೀಸ್ ಡೇಟ್ ಕಡೆಗೇ ಇರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಜೊತೆಗೆ ಮೆಗಾ ಎಂದು ಕೊಟ್ಟಿರುವ ಕಾರಣ ರಿಲೀಸ್ ವಿಚಾರವೇ ಇರಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ.

ಉಪೇಂದ್ರರನ್ನು ನಟನಾಗಿರುವುದಕ್ಕಿಂತ ನಿರ್ದೇಶಕರಾಗಿ ಆರಾಧಿಸುವ ಅಭಿಮಾನಿ ಬಳಗವೇ ಇದೆ. ನಿರ್ದೇಶಕನಾಗಿ ಉಪೇಂದ್ರ ಇಂದಿಗೂ ಘಟಾನುಘಟಿಗಳೇ ಆದರ್ಶರಾಗಿರುವವರು. ಅವರ ಸಿನಿಮಾಗಳೂ ವಿಭಿನ್ನವಾಗಿರುತ್ತದೆ. ಇದೀಗ ಯುಐ ಕೂಡಾ ಇದಕ್ಕಿಂತ ಭಿನ್ನವೇನಲ್ಲ.  ಹೀಗಾಗಿ ಸಿನಿಮಾ ಬಗ್ಗೆ ಏನು ಅಪ್ ಡೇಟ್ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಸೇರಿ 6 ಮಂದಿ ವಿರುದ್ಧ ಇಂದು ಮಹತ್ವದ ತೀರ್ಪು ನೀಡಲಿರುವ ಕೋರ್ಟ್