ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಜೊತೆಗೆ ನಾಯಕರಾಗಿ ನಟಿಸಿರುವ ಯುಐ ಸಿನಿಮಾ ಇಂದು ಥಿಯೇಟರ್ ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಲು ನಿಮಗೆ ಈ ಕಾರಣಗಳು ಸಾಕು.
ಉಪೇಂದ್ರ ನಿರ್ದೇಶನ
ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ನಿರ್ದೇಶನಕ್ಕೆ ಎಷ್ಟೋ ಜನ ಘಟಾನುಘಟಿಗಳೇ ಫ್ಯಾನ್ಸ್ ಗಳಿದ್ದಾರೆ. ಉಪೇಂದ್ರ ಸಿನಿಮಾಗಳೆಂದರೆ ವಿಭಿನ್ನವಾಗಿಯೇ ಇರುತ್ತದೆ ಎಂದು ಅಭಿಮಾನಿಗಳಿಗೆ ನಂಬಿಕೆಯಿದೆ. ಈ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿರುವ ಕಾರಣಕ್ಕಾದರೂ ನೋಡಲೇಬೇಕು.
ಯುಐ ಟೈಟಲ್ ನಲ್ಲೇ ಕುತೂಹಲ
ಯುಐ ಟೈಟಲ್ಲೇ ವಿಶೇಷವಾಗಿದೆ. ಯುಐ ಎಂದರೆ ಏನು ಎಂದು ನೋಡಲು ನೀವು ಸಿನಿಮಾ ನೋಡಲೇಬೇಕು. ಯುಐ ಪದದ ಅರ್ಥವನ್ನು ಉಪೇಂದ್ರ ಸಿನಿಮಾದಲ್ಲಿತಮ್ಮದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ವಿಶಿಷ್ಟ ಕತೆ
ಉಪೇಂದ್ರ ಸಿನಿಮಾಗಳ ಕತೆಯೇ ವಿಶಿಷ್ಟವಾಗಿದೆ. ಚಿತ್ರದ ಟ್ರೈಲರ್ ನೋಡಿದವರು ಇದು ಐತಿಹಾಸಿಕ ಕತೆಯೋ, ಕಾಲ್ಪನಿಕ ಕತೆಯೋ ಎಂಬ ಕನ್ ಫ್ಯೂಸ್ ನಲ್ಲಿದ್ದಾರೆ. ಇದನ್ನು ತಿಳಿಯಬೇಕೆಂದರೆ ಈ ಸಿನಿಮಾವನ್ನು ನೋಡಬೇಕು.