Select Your Language

Notifications

webdunia
webdunia
webdunia
webdunia

ಟಿವಿಕೆ ರಾಲಿಯಲ್ಲಿ ಕಾಲ್ತುಳಿತ: ವಿಜಯ್ ಫ್ಯಾನ್ಸ್ ದೂರುತ್ತಿರುವುದು ಈಗ ಇವರನ್ನೇ

TVK Vijay

Krishnaveni K

ಚೆನ್ನೈ , ಸೋಮವಾರ, 29 ಸೆಪ್ಟಂಬರ್ 2025 (09:58 IST)
ಚೆನ್ನೈ: ಕರೂರು ಟಿವಿಕೆ ಪಕ್ಷದ ರಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 30 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡು ದುರಂತ ಸಂಭವಿಸಿತ್ತು. ಇದೀಗ  ಆ ದುರಂತಕ್ಕೆ ವಿಜಯ್ ಫ್ಯಾನ್ಸ್ ದೂರುತ್ತಿರುವುದು ಯಾರನ್ನು ಗೊತ್ತಾ?

ಮೊನ್ನೆ ಸಂಜೆ ಕರೂರಿನಲ್ಲಿ ಟಿವಿಕೆ ಪಕ್ಷದ ಸ್ಥಾಪಕ, ದಳಪತಿ ವಿಜಯ್ ಬರುತ್ತಾರೆಂದು 30000 ಕ್ಕೂ ಅಧಿಕ ಮಂದಿ ಒಂದೇ ಕಡೆ ಸೇರಿದ್ದರಿಂದ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಘಟನೆಗೆ ಸಂಬಂಧಿಸಿದಂತೆ ವಿಜಯ್ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಅವರನ್ನು ಬಂಧಿಸಬೇಕು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ವಿಜಯ್ ಫ್ಯಾನ್ಸ್ ಘಟನೆಗೆ ಕಾರಣವೇ ಆಡಳಿತಾರೂಢ ಡಿಎಂಕೆ ಪಕ್ಷ ಎಂದಿದೆ. ಇದೆಲ್ಲಾ ಡಿಎಂಕೆ ಮಾಡಿಸಿದ ಗಲಾಟೆ. ಇದು ಡಿಎಂಕೆಯ ಚೀಪ್ ಗಿಮಿಕ್. ನಮ್ಮ ದಳಪತಿಗೆ ಕೆಟ್ಟ ಹೆಸರು ಬರಲೆಂದು ಡಿಎಂಕೆಯವರೇ ಈ ಗಲಾಟೆ ಮಾಡಿಸಿರಬಹುದು ಎಂದು ಕೆಲವರು ವಿಜಯ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಇದಕ್ಕೆ ಡಿಎಂಕೆ ಬೆಂಬಲಿಗರೂ ತಿರುಗೇಟು ನೀಡಿದ್ದು, ತನ್ನ ಸ್ವಾರ್ಥಕ್ಕಾಗಿ ವಿಜಯ್ ಹಲವು ಅಮಾಯಕರ ಪ್ರಾಣ ಬಲಿ ತೆಗೆದುಕೊಂಡರು. ಅವರ ನಿರ್ಲ್ಯಕ್ಷವೇ ಘಟನೆಗೆ ಕಾರಣ ಎಂದು ದೂರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್