Select Your Language

Notifications

webdunia
webdunia
webdunia
webdunia

Thalapathy Vijay: ಸಿನಿಮಾಗಳಲ್ಲಿ ನಮ್ಮನ್ನು ಭಯೋತ್ಪಾದಕರಂತೆ ತೋರಿಸ್ತೀರಿ: ದಳಪತಿ ವಿಜಯ್ ವಿರುದ್ಧ ಸಿಡಿದೆದ್ದ ಮುಸ್ಲಿಮರು

Thalapathy vijay

Krishnaveni K

ಚೆನ್ನೈ , ಗುರುವಾರ, 17 ಏಪ್ರಿಲ್ 2025 (13:40 IST)
ಚೆನ್ನೈ: ಸಿನಿಮಾಗಳಲ್ಲಿ ನಮ್ಮನ್ನು ಭಯೋತ್ಪಾದಕರಂತೆ ತೋರಿಸುತ್ತೀರಿ. ರಿಯಲ್ ಲೈಫ್ ನಲ್ಲಿ ಇಫ್ತಾರ್ ಕೂಟದಲ್ಲಿ ಭಾಗಿಯಾಗ್ತೀರಿ ಎಂದು ನಟ, ರಾಜಕಾರಣಿ ದಳಪತಿ ವಿಜಯ್ ವಿರುದ್ಧ ಮುಸ್ಲಿಮರು ಸಿಡಿದೆದ್ದಿದ್ದಾರೆ. ವಿಜಯ್ ವಿರುದ್ಧ ಈಗ ಫತ್ವಾ ಹೊರಡಿಸಲಾಗಿದೆ.

ದಳಪತಿ ವಿಜಯ್ ಇತ್ತೀಚೆಗೆ ಮುಸ್ಲಿಂ ಟೋಪಿ ಧರಿಸಿ ಮುಸಲ್ಮಾನ ಬಾಂಧವರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯಿದೆ ಪಾಸ್ ಮಾಡಿದಾಗ ಕೇಂದ್ರದ ವಿರುದ್ಧ ಮುಸ್ಲಿಮರ ಪರ ಹೋರಾಡುವುದಾಗಿ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಈಗ ದಳಪತಿ ವಿಜಯ್ ಗೆ ಎಐಎಂಜೆ ಅಧ್ಯಕ್ಷ ಮೌಲಾನಾ ಮುಫ್ತಿ ಫತ್ವಾ ಹೊರಡಿಸಿ ಶಾಕ್ ನೀಡಿದ್ದಾರೆ. ದಳಪತಿ ವಿಜಯ್ ಸಿನಿಮಾಗಳಲ್ಲಿ ಮುಸ್ಲಿಮರನ್ನು ನಕಾರಾತ್ಮಕವಾಗಿ ತೋರಿಸುತ್ತಾರೆ. ಜೂಜುಕೋರರು ಮತ್ತು ಮದ್ಯ ಗ್ರಾಹಕರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದರಿಂದ ಫತ್ವಾ ಹೊರಡಿಸುತ್ತಿದ್ದೇವೆ ಎಂದಿದ್ದಾರೆ.

ತಮಿಳುನಾಡಿನ ಸುನ್ನಿ ಮುಸ್ಲಿಂ ಸಮುದಾಯದವರಿಗೆ ವಿಜಯ್ ಮೇಲೆ ಅಸಮಾಧಾನವಿದೆ. ಈ ಕಾರಣಕ್ಕೆ ಮುಸ್ಲಿಮರು ವಿಜಯ್ ಜೊತೆ ನಿಲ್ಲಬಾರದು ಎಂದಿರುವ ಅವರು ಫತ್ವಾ ಹೊರಡಿಸುತ್ತಿರುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Kiccha Sudeep:ಬಿಲ್ಲ ರಂಗ ಬಾಷಾ ಸಿನಿಮಾ ಚಿತ್ರೀಕರಣ ಶುರು ಮಾಡಿದ ಸುದೀಪ್: ಇದೊಂದು ವಿಚಾರ ಆಮೇಲೆ ಹೇಳ್ತೀನಿ ಎಂದ ಕಿಚ್ಚ