Select Your Language

Notifications

webdunia
webdunia
webdunia
webdunia

Kiccha Sudeep:ಬಿಲ್ಲ ರಂಗ ಬಾಷಾ ಸಿನಿಮಾ ಚಿತ್ರೀಕರಣ ಶುರು ಮಾಡಿದ ಸುದೀಪ್: ಇದೊಂದು ವಿಚಾರ ಆಮೇಲೆ ಹೇಳ್ತೀನಿ ಎಂದ ಕಿಚ್ಚ

Kiccha Sudeep

Krishnaveni K

ಬೆಂಗಳೂರು , ಗುರುವಾರ, 17 ಏಪ್ರಿಲ್ 2025 (10:07 IST)
Photo Credit: X
ಬೆಂಗಳೂರು: ಕೊನೆಗೂ ಕಿಚ್ಚ ಸುದೀಪ್ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ತಮ್ಮ ಮುಂಬರುವ ಬಿಲ್ಲ ರಂಗ ಭಾಷ ಸಿನಿಮಾ ಚಿತ್ರೀಕರಣವನ್ನು ಸುದೀಪ್ ಶುರು ಮಾಡಿದ್ದಾರೆ. ಆದರೆ ಇದೊಂದು ವಿಚಾರನ್ನು ಆಮೇಲೆ ಹೇಳ್ತೀನಿ ಎಂದಿದ್ದಾರೆ.

ಮ್ಯಾಕ್ಸ್ ಸಿನಿಮಾ ಬಿಡುಗಡೆ ಬಳಿಕ ಕೆಲವು ದಿನ ಬ್ರೇಕ್ ತೆಗೆದುಕೊಂಡಿದ್ದ ಸುದೀಪ್ ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಬಹಳ ಸಮಯದ ಹಿಂದೆಯೇ ಅವರು ಪ್ಲ್ಯಾನ್ ಮಾಡಿಕೊಂಡಿದ್ದರು. ಇದೀಗ ಸಿನಿಮಾ ಸೆಟ್ಟೇರಿದೆ.

ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕ, ಕತೆಗಾರ ಅನೂಪ್ ಭಂಡಾರಿಯೇ ಈ ಸಿನಿಮಾವನ್ನೂ ಮಾಡುತ್ತಿದ್ದಾರೆ. ನಿನ್ನೆಯಿಂದ ಸಿನಿಮಾ ಚಿತ್ರೀಕರಣ ಶುರುವಾಗಿದೆ ಎಂದು ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಇನ್ನು, ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಆದರೆ ಈ ಬಗ್ಗೆ ಸದ್ಯಕ್ಕೆ ಏನೂ ಹೇಳಲ್ಲ. ಮುಂದೆ ಎಲ್ಲವನ್ನೂ ಹೇಳಲಿದ್ದೇವೆ ಎಂದು ಕಿಚ್ಚ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ