ಇಂದು ಹಿರಿಯ ನಟ, ದಿವಂಗತ ಅಂಬರೀಶ್ ಹಾಗೂ ಸುಮಲತಾ ಅವರ ಮೊಮ್ಮಗನ ನಾಮಕರಣ ಅದ್ಧೂರಿಯಾಗಿ ನಡೆಯಿತು. ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ನಡೆದ ಅದ್ಧೂರಿ ತೊಟ್ಟಿಲು ಶಾಸ್ತ್ರದಲ್ಲಿ ಕನ್ನಡ ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು.
ಅಭಿಷೇಕ್ ಹಾಗು ಅವಿವಾ ದಂಪತಿ ತಮ್ಮ ಮಗನಿಗೆ ರಾಣಾ ಅಮರ್ ಎಂದು ಪವರ್ ಫುಲ್ ಹೆಸರಿಟ್ಟಿದ್ದಾರೆ. ನಟ ದರ್ಶನ್ ಅವರು ಸುಮಲತಾ ಮೊಮ್ಮಗನ ನಾಮಕರಣಕ್ಕೆ ಬರುತ್ತಾರೆಂಬ ಚರ್ಚೆ ಜೋರಾಗಿತ್ತು. ಆದರೆ ದರ್ಶನ್ ಅವರು ನಾಮಕರಣಕ್ಕೆ ಗೈರಾಗಿದ್ದರು. ಸುಮಲತಾ ಮನೆಯ ಕಾರ್ಯಕ್ರಮದಿಂದ ದರ್ಶನ್ ಅವರು ದೂರ ಉಳಿದಿರುವುದು ಮತ್ತೇ ಕುತೂಹಲ ಮೂಡಿಸಿದೆ.
ವಿಶೇಷ ಏನೆಂದರೆ ಈ ನಾಮಕರಣದಲ್ಲಿ ಕಿಚ್ಚ ಸುದೀಪ್ ದಂಪತಿ ಒಟ್ಟಿಗೆ ಆಗಮಿಸಿ, ಅಭಿಷೇಕ್ ಹಾಗೂ ಅವಿವಾ ದಂಪತಿಗೆ ಶುಭಹಾರೈಸಿದ್ದಾರೆ. ಮಗುವಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಸುಮಲತಾ ಅಂಬರೀಶ್ ಮನೆಯ ಸಂಭ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ರಾಕ್‌ಲೈನ್ ವೆಂಕಟೇಶ್ ಅವರು ಭಾಗಿಯಾಗಿದ್ದರು.
ಇನ್ನೂ ದರ್ಶನ್ ಅವರು ಈಚೆಗೆ ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಸಿನಿಮಾಕ್ಕಾಗಿ ಮೈಸೂರಿನಲ್ಲಿರುವ ದರ್ಶನ್,ಫಾರ್ಮ್‌ಹೌಸ್‌ನಲ್ಲೇ ವೀಕೆಂಡ್ ಕಳೆಯುತ್ತಿದ್ದಾರೆ ಎನ್ನಲಾಗಿದೆ.