ಬೆಂಗಳೂರು: ಒಂದು ಕಾಲದ ಟಾಪ್ ಹೀರೋಯಿನ್ 58 ವರ್ಷದ ಹಿರಿಯ ನಟಿ ಖುಷ್ಬೂ ಈಗಾಲೂ 30 ವರ್ಷದ ಯುವತಿಯಂತೆ ಕಾಣುತ್ತಾರೆ. ಈಗೀನ ನಟಿಯರು ನಾಚುವಂತೆ ಮಾಡ್ರನ್ ಡ್ರೆಸ್ ಹಾಕಿ ಪೋಟೋಗೆ ಫೋಸ್ ನೀಡಿದ್ದರು.
ಈ ಫೋಟೋದಲ್ಲಿ ಖುಷ್ಬೂ ಅವರು ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ. ಕೇಶವಿನ್ಯಾಸ ತುಂಬಾ ಸ್ಟೈಲಿಶ್ ಆಗಿದೆ. ತಮ್ಮ ಫೋಟೋಗೆ “ಬ್ಯಾಕ್ ಟು ದಿ ಫ್ಯೂಚರ್” ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ನಟಿಯ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇವರ ಲುಕ್‌ಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲವರು ಖುಷ್ಬೂ ಹೊಸ ಲುಕ್ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅವರು ಹೇಗೆ ಇಷ್ಟೊಂದು ತೆಳ್ಳಗಾದರು ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಎಷ್ಟೇ ತೆಳ್ಳಗಿದ್ದರೂ ನಿಮ್ಮ ಮುಖದಲ್ಲಿ ವೃದ್ಧಾಪ್ಯದ ಲಕ್ಷಣಗಳು ಇನ್ನೂ ಕಾಣುತ್ತಿವೆ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.
ಮತ್ತೊಬ್ಬ ಇದೆಲ್ಲಾ ಇಂಜೆಕ್ಷನ್‌ನಿಂದಾಗಿ ಆಗಿರುವುದು. ನೀವು ಈ ರೀತಿ ಮಾಡಿದರೆ ನಿಮ್ಮ ಅಭಿಮಾನಿಗಳು ಕೂಡ ಅದನ್ನೇ ಮಾಡುತ್ತಾರೆ ಎಂದು ಟೀಕೆ ಮಾಡಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಖುಷ್ಭೂ, ನಿಮ್ಮಂತಹ ಜನರ ನೋವು ನನಗೆ ಅರ್ಥವಾಗುತ್ತಿಲ್ಲ. ನೀವು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮುಖವನ್ನು ಸಹ ತೋರಿಸುವುದಿಲ್ಲ. ಏಕೆಂದರೆ ನೀವು ಎಷ್ಟು ದಡ್ಡರು ಎಂದು ನಿಮಗೆ ತಿಳಿದಿದೆ! ಇದು ನಾಚಿಕೆಗೇಡಿನ ಸಂಗತಿ. ನಿಮ್ಮ ಹೆತ್ತವರ ಬಗ್ಗೆ ಯೋಚಿಸಿದಾಗ ನಿಜಕ್ಕೂ ಅಯ್ಯೋ ಎನಿಸುತ್ತದೆ ಎಂದು ಎಕ್ಸ್ ಖಾತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.