ಬೆಂಗಳೂರು: ಈಚೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದ ಕಿರುತೆರೆ ನಟಿ ಪದ್ಮಿನಿ ದೇವನಹಳ್ಳಿ ಹಾಗೂ ನಟ ಅಜಯ್ ರಾಜ್ ದಂಪತಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ.
ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ಪದ್ಮಿನಿ ಹಾಗೂ ಲಕ್ಷ್ಮೀ ಸಿವಾಸ ಸೀರಿಯಲ್ ಮೂಲಕ ನಟ ಅಜಯ್ ರಾಜ್ ಅವರು ಕಿರುತೆರೆಯಲ್ಲಿ ಭಾರೀ ಜನಮನ್ನಣೆ ಗಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಏಪ್ರಿಲ್ 15ರಂದು ಈ ದಂಪತಿ ಗಂಡು ಮಗುವನ್ನು ಸ್ವಾಗತಿಸಿದರು. ಈಚೆಗೆ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿ ಪದ್ಮಿನಿ ಹಾಗೂ ಅಜಯ್ ಅವರು ಶೇರ್ ಮಾಡಿಕೊಂಡಿದ್ದರು.
ತಂದೆಯಾಗಿರುವ ಖುಷಿಯಲ್ಲಿದ್ದಾರೆ ಅಜಯ್ ರಾಜ್. ಈ ದಂಪತಿಗೆ ಇದೀಗ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.
ಅಂದಹಾಗೆ, ಮಹಾದೇವಿ, ಹಿಟ್ಲರ್ ಕಲ್ಯಾಣ ಖ್ಯಾತಿಯ ಪದ್ಮಿನಿ ಅವರು ಅಜಯ್ ರಾಜ್ ಜೊತೆ 4 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.