Publish Date: Mon, 26 Mar 2018 (06:54 IST)
Updated Date: Mon, 26 Mar 2018 (06:57 IST)
ಶಿವಮೊಗ್ಗ : ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಸೋಮವಾರ(ಇಂದು) ಹಸೆಮಣೆ ಏರಲಿರುವ ಕಾರಣ ರಾಜ್ ಕುಮಾರ್ ಅವರ ಕುಟುಂಬದಲ್ಲಿ ಇಂದು ಸಂಭ್ರಮ, ಸಡಗರ ಮನೆಮಾಡಿದೆ.
ರಾಜ್‍ಕುಮಾರ್ ಪುತ್ರಿ ಲಕ್ಷ್ಮಿ ಅವರ ಮಗ ಷಣ್ಮುಖ ಅವರು ಇಂದು ಸಾಗರದ ಖ್ಯಾತ ವಕೀಲ ಬರೂರು ಗ್ರಾಮದ ನಾಗರಾಜ್ ಮಗಳಾದ ಸಿಂಧು ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸಮಾರಂಭ ಶಿವಮೊಗ್ಗದ ನವಿಲೆ ರಸ್ತೆಯಲ್ಲಿರುವ ಸರ್ಜಿ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಹಾಲ್‍ನಲ್ಲಿ ನೆರವೇರಲಿದೆ. ಬೆಳಗ್ಗೆ 9:30ಕ್ಕೆ ಮಹೂರ್ತವಿದ್ದು ರಾಜ್ ಕುಮಾರ್ ಕುಟುಂಬದವರೆಲ್ಲಾ ಇಂದು ನಡೆಯುವ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ