Select Your Language

Notifications

webdunia
webdunia
webdunia
webdunia

ರಶ್ಮಿಕಾ ಮಂದಣ್ಣಗೆ ಕಠಿಣ ಸ್ಪರ್ಧೆ ನೀಡಲಿದ್ದಾರಂತೆ ಈ ಯುವನಟಿ

ರಶ್ಮಿಕಾ ಮಂದಣ್ಣಗೆ ಕಠಿಣ ಸ್ಪರ್ಧೆ ನೀಡಲಿದ್ದಾರಂತೆ ಈ ಯುವನಟಿ
ಹೈದರಾಬಾದ್ , ಶುಕ್ರವಾರ, 19 ಫೆಬ್ರವರಿ 2021 (11:12 IST)
ಹೈದರಾಬಾದ್ : ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿದ್ದಾರೆ. ಇವರಿಗೆ ಹಲವು ಆಫರ್ ಗಳು ಬರುತ್ತಿದೆ. ಇದೀಗ ನಟಿ ಬಾಲಿವುಡ್ ಗೂ ಪ್ರವೇಶಿಸಿದ್ದಾರೆ. ಇಂತಹ ಖ್ಯಾತ ನಟಿಗೆ ಇದೀಗ ಯುವ ನಟಿಯೊಬ್ಬಳು ಸ್ಪರ್ಧೆ ನೀಡಲಿದ್ದಾರೆ ಎನ್ನಲಾಗಿದೆ.

ಹೌದು. ಉಪ್ಪೇನಾ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ ಶೆಟ್ಟಿ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ  ಪೈಪೋಟಿ ನಡೆಸಲಿದ್ದಾರೆ ಎನ್ನಲಾಗಿದೆ. ಉಪ್ಪೇನಾ ಚಿತ್ರ ಸೂಪರ್ ಹಿಟ್ ಆಗಿದ್ದು, ಇದರಲ್ಲಿ ಕೃತಿ ಶೆಟ್ಟಿ ನಟನೆ ಎಲ್ಲರ ಮನಗೆದ್ದಿದೆ. ಹೀಗಾಗಿ ಈಗಾಗಲೇ ಅವರ ಬಳಿ ಡೇಟ್ಸ್ ಪಡೆಯಲು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ ಎನ್ನಲಾಗಿದೆ. ಇದೀಗ ಅವರು ನಾನಿಯ ‘ಶ್ಯಾಮ್ ಸಿಂಗಾ ರಾಯ್’ ಮತ್ತು ಸುಧೀರ್ ಬಾಬು ಅವರ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ನಟಿ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲಿಯೇ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಗರು ವೀಕ್ಷಿಸುವ ಅಭಿಮಾನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಿರುವ ಧ್ರುವ ಸರ್ಜಾ