Select Your Language

Notifications

webdunia
webdunia
webdunia
webdunia

‘ಆಚಾರ್ಯ’ ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಲಿದ್ದಾರೆ ಈ ಬಾಲಿವುಡ್ ನಟಿ

‘ಆಚಾರ್ಯ’ ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಲಿದ್ದಾರೆ ಈ ಬಾಲಿವುಡ್ ನಟಿ
ಹೈದರಾಬಾದ್ , ಸೋಮವಾರ, 30 ನವೆಂಬರ್ 2020 (08:31 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರ 152ನೇ ಚಿತ್ರ ‘ಆಚಾರ್ಯ’ ಚಿತ್ರವನ್ನು ಮ್ಯಾಟ್ನಿ ಎಂಟರ್ ಟೈನ್ ಮೆಂಟ್ ಮತ್ತು ಕೊನಿಡೆಲಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರಂಜನ್ ರೆಡ್ಡಿ ಮತ್ತು ರಾಮ ಚರಣ್ ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಟ ರಾಮ್ ಚರಣ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕಾಜಲ್ ಅಗರ್ ವಾಲ್ ಚಿರಂಜೀವಿ ಅವರ ಜೋಡಿಯಾಗಿ ನಟಿಸುತ್ತಿದ್ದರೆ. ಇದೀಗ ರಾಮ್ ಚರಣ್ ಅವರ ಜೋಡಿಯ ಆಯ್ಕೆ ಕೆಲಸ ನಡೆಯುತ್ತಿದೆ. ಈ ಹಿಂದೆ ನಟಿ ತಮನ್ನಾ ಬಾಟಿಯಾ ರಾಮ್ ಚರಣ್ ಜೋಡಿಯಾಗಲಿದ್ದಾರೆ ಎಂದು ವರದಿಯಾಗಿತ್ತು.

ಆನಂತರ ಇದೀಗ ಬಾಲಿವುಡ್ ನಟಿ ಕಿಯಾರ ಅಡ್ವಾಣಿ ‘ಆಚಾರ್ಯ’ ಚಿತ್ರದಲ್ಲಿ ಚರಣ್ ನಾಯಕಿಯಾಗಿ ನಟಿಸುವುದರ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಮುಂದಿನ ವಾರ ಈ ಬಗ್ಗೆ ರಾಮ್ ಚರಣ್ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ಮಾಡುತ್ತಿರುವವರು ಯಾರು ಗೊತ್ತಾ?