Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಪುಷ್ಪಾ ಚಿತ್ರದಲ್ಲಿ ಖಳನಾಯಕನ ಆಯ್ಕೆ ಮಾಡುತ್ತಿರುವ ಚಿತ್ರತಂಡ

ಅಲ್ಲು ಅರ್ಜುನ್ ಪುಷ್ಪಾ ಚಿತ್ರದಲ್ಲಿ ಖಳನಾಯಕನ ಆಯ್ಕೆ ಮಾಡುತ್ತಿರುವ ಚಿತ್ರತಂಡ
ಹೈದರಾಬಾದ್ , ಶನಿವಾರ, 28 ನವೆಂಬರ್ 2020 (17:28 IST)
ಹೈದರಾಬಾದ್ : ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರವನ್ನು ತೆಲುಗು ಸೇರಿದಂತೆ ತಮಿಳು, ಮಲಯಾಳಂ, ಕನ್ನಡ, ಮತ್ತು ಹಿಂದಿಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ಯಾಂಸೆಟ್ಟಿ ಮೀಡಿಯಾ ಬ್ಯಾನರ್ ಗಳು ನಿರ್ಮಿಸಲಿವೆ.

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದೀಗ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕಾಗಿ ಚಿತ್ರತಂಡ ಈಗಾಗಲೇ ಕೆಲವರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಡಿಸ್ಕೋರಾಜಾ ಮತ್ತು ಕಲರ್ ಫೋಟೊ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ ಹಿರಿಯ ಹಾಸ್ಯನಟ ಸುನೀಲ್, ಪುಷ್ಪಾ ಚಿತ್ರದ ಪಾತ್ರವನ್ನು ಇಷ್ಟಪಡುವಂತೆಯೇ ಈಗ ಉತ್ತಮವಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.  ಅದೇರೀತಿ ರಾವ್ ರಮೇಶ್ ಮತ್ತು ಮುಖೇಶ್ ರುಶಿ ಅವರನ್ನು ಖಳನಾಯಕರನ್ನಾಗಿ ತೆಗೆದುಕೊಳ್ಳಬಹುದಿತ್ತು ಎನ್ನಲಾಗಿದೆ. ನಿರ್ದೇಶಕ ಸುಕುಮಾರ್ ಮುಖ್ಯ ಖಳನಾಯಕನನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಪ್ ಆದ ಜೂನಿಯರ್ ಎನ್ ಟಿಆರ್ ಈ ಚಿತ್ರ ಹಿಂದಿಗೆ ರಿಮೇಕ್