ನಾಳೆ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾ ನಾಳೆ ತೆರೆ ಮೇಲೆ ಅಪ್ಪಳಿಸಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ಮೇಲೆ ಇದೀಗ ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ದರ್ಶನ್ ಸಿನಿಮಾಗೆ ಕನ್ನಡ ಸಿನಿಮಾ ರಂಗದ ತಾರೆಯರಾದ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ನಟಿ ರಕ್ಷಿತಾ ಪ್ರೇಮ್, ಸೋನಾಲ್ ಮೊಂತೇರೋ, ರಚಿತಾ ರಾಮ್ ಹಾಗೂ ಧನ್ವೀರ್ ಶುಭಕೋರಿದ್ದಾರೆ.
ಇದೀಗ ದರ್ಶನ್ ಸಿನಿಮಾ ಬೆಂಬಲಕ್ಕೆ ಕನ್ನಡ ಸಿನಿಮಾ ರಂಗದ ಕೆಲ ನಟ ನಟಿಯರು ತಮ್ಮ ಇನ್‌ಸ್ಟಾಗ್ರಾಂ ತೆಗೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.
ದರ್ಶನ್ ಅವರ ಡೆವಿಲ್ ಸಿನಿಮಾಗೆ ಶುಭವಾಗಲಿಯೆಂದು ರಿಷಬ್ ಶೆಟ್ಟಿ ಪೋಸ್ಟರ್ ಹಂಚಿ ಶುಭಕೋರಿದ್ದಾರೆ.
ಸಿನಿಮಾ ಪ್ರಚಾರಕ್ಕಾಗಿ ಸಿನಿಮಾ ತಂಡ, ದರ್ಶನ್ ಪತ್ನಿ ವಿಜಯಲಕ್ಷ್ಮಿ, ಹಾಗೂ ಅವರ ಸೆಲೆಬ್ರಿಟಿಗಳು ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಮಾಡಿದ್ದರು.
ರಾಜ್ಯದ ಮೂಲೆ ಮೂಲೆಯಿಂದ ಬಂದ ದರ್ಶನ್ ಸೆಲೆಬ್ರಿಟಿಗಳ ಜತೆ ಸಿನಿಮಾ ತಂಡ, ವಿಜಯಲಕ್ಷ್ಮಿ ದರ್ಶನ್ ಅವರು ಡೆವಿಲ್ ಸಿನಿಮಾದ ಪ್ರಚಾರಕ್ಕಾಗಿ ಅವರ ಬಳಿ ಕೇಳಿಕೊಂಡಿದ್ದರು. ಇದೀಗ ಅವರ ಅಭಿಮಾನಿಗಳು ಈ ಹಿಂದಿನ ದರ್ಶನ್ ವಿಡಿಯೋವನ್ನು ಹಂಚಿಕೊಂಡು, ತಮ್ಮ ನೆಚ್ಚಿನ ನಟನ ನಡೆಯನ್ನು ಗುಣಗಾನ ಮಾಡುತ್ತಿದ್ದಾರೆ.