Select Your Language

Notifications

webdunia
webdunia
webdunia
webdunia

ತುಳಸಿ ಗರ್ಭಿಣಿಯಾದ ವಿಚಾರಕ್ಕೆ ವೀಕ್ಷಕರ ಬೈಗುಳಗಳ ಸುರಿಮಳೆ, ಚೇಂಜ್ ಆಯ್ತು ಶ್ರೀರಸ್ತು ಶುಭಮಸ್ತು ಕಥೆ

ತುಳಸಿ ಗರ್ಭಿಣಿಯಾದ ವಿಚಾರಕ್ಕೆ ವೀಕ್ಷಕರ ಬೈಗುಳಗಳ ಸುರಿಮಳೆ, ಚೇಂಜ್ ಆಯ್ತು ಶ್ರೀರಸ್ತು ಶುಭಮಸ್ತು ಕಥೆ

Sampriya

ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2024 (17:33 IST)
Photo Courtesy X
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ಆರಂಭದಿಂದಲೂ ಸೀರಿಯಲ್ ಪ್ರಿಯರಿಗೆ ಮನರಂಜನೆಯನ್ನು ನೀಡುತ್ತಲೇ ಬಂದಿದೆ. ಟಾಪ್‌ ರೇಟಿಂಗ್‌ನಲ್ಲಿ ಪ್ರಸಾರವಾಗುತ್ತಿರುವ ಈ ಸೀರಿಯಲ್‌ನ ಟ್ವಿಸ್ಟ್‌ ವೀಕ್ಷಕರು ಅಸಮಾಧಾನಗೊಂಡಿದ್ದರು.

ತುಳಸಿ ಗರ್ಭಿಣಿಯಾದ ವಿಚಾರಕ್ಕೆ ವೀಕ್ಷಕರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ನಿರ್ದೇಶಕರೆ ಇದನ್ನೆಲ್ಲ ನೋಡಲು ಅಸಹ್ಯವಾಗುತ್ತಿದೆ, ಪ್ಲೀಸ್ ಕಥೆ ಚೇಂಜ್ ಮಾಡಿ ಎಂದು ಕಮೆಂಟ್‌ಗಳ ಸುರಿಮಳೆ ಗೈದಿದ್ದಾರೆ. ಧಾರವಾಹಿಯ ಕಥೆ ಬದಲಾಯಿಸುವಂತೆ ಒತ್ತಾಯ ಜಾಸ್ತಿಯಾಗುತ್ತಿದ್ದ ಬೆನ್ನಲ್ಲೇ ಕಥೆಗೆ ಹೊಸ ಟ್ವಿಸ್ಟ್ ನೀಡಲಾಗಿದೆ.

ವೈದ್ಯಕೀಯ ಪರೀಕ್ಷೆ ವೇಳೆ ಮಗುವಿನ ಬೆಳವಣಿಗೆ ಸರಿಯಿಲ್ಲದ ಕಾರಣ ವೈದ್ಯರು ಮಗುವನ್ನು ಅಬಾರ್ಟ್ ಮಾಡಲು ಸೂಚಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ್ದಲ್ಲಿ ತುಳಸಿ ಹಾಗೂ ಮಗುವಿನ ಜೀವಕ್ಕೆ ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಕೇಳಿ ಮಾಧವ ಹಾಗೂ ತುಳಸಿ ಶಾಕ್ ಆಗಿದ್ದಾರೆ.

ಈ ಪ್ರೋಮೋ ನೋಡಿದವರು ಚೆನ್ನಾಗಿ ಡೈರೆಕ್ಟರ್‌ಗೆ ಬೈದಿರೋದಕ್ಕೆ ಕಥೆನೆ ಚೇಂಜ್ ಮಾಡಿದ್ದಾರೆ. ಒಳ್ಳೆ ಕೆಲಸ, ಸುಧಾರಾಣಿ ಅವರ ವ್ಯಕ್ತಿತ್ವಕ್ಕೆ ಇದು ಶೋಭೆಯಲ್ಲ ಎಂದಿದ್ದಾರೆ.

ಮತ್ತೊಬ್ಬರು ಈ ವಯಸ್ಸಿನಲ್ಲಿ ಮಗು ಆಗುವುದು ಚೆನ್ನಾಗಿರುವುದಿಲ್ಲ ಅದಕ್ಕಾಗಿ ದಯವಿಟ್ಟು ಮಗುವನ್ನು ಅಬಾರ್ಟ್ ಮಾಡಿ, ಕತೆಯನ್ನು ಮುಂದುವರೆಸಿ ಎಂದಿದ್ದಾರೆ.

ಪ್ರೇಕ್ಷಕರ ಒತ್ತಾಯದ ಮೇರೆ ಸ್ಟೋರಿ ಚೇಂಜ್,  ಮತ್ತೊಬ್ಬರು ಥೂ ಕರ್ಮ, ಯಾವ ದರಿದ್ರ ಕಥೆನೋ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.

ಕಥೆ ಈ  ರೀತಿಯಾಗಲು ತಿರುಗಲು ನೆಟ್ಟಿಗರ ಕಮೆಂಟ್ಸ್ ಕಾರಣ ಎಂದಿದ್ದಾರೆ. ಒಟ್ಟಾರೆ ತುಳಸಿ ಮಗು ತೆಗೆಯಲು ಹೇಳಿದ್ದು ಶ್ರೀರಸ್ತು ಶುಭಮಸ್ತು ಸೀರಿಯಲ್ ಪ್ರಿಯರಿಗೆ ಖುಷಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಯರ್ ಜೊತೆ ಮೀಟಿಂಗ್ ಬಳಿಕ ದರ್ಶನ್ ಮುಖದಲ್ಲಿ ನಗು: ಅಣ್ಣಂಗೆ ಬೇಲ್ ಫಿಕ್ಸ್