Select Your Language

Notifications

webdunia
webdunia
webdunia
webdunia

ಯಾರೇ ಬಂದರೂ ನಾನೇ ನಂಬರ್‌ 1 ಅಂತಿದೆ ಈ ಸೀರಿಯಲ್

ಯಾರೇ ಬಂದರೂ ನಾನೇ ನಂಬರ್‌ 1 ಅಂತಿದೆ ಈ ಸೀರಿಯಲ್

Sampriya

ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2024 (15:33 IST)
Photo Courtesy X
ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬೇರೆ ಬೇರೆ ವಾಹಿನಿಗಳ 37ನೇ ವಾರದ ಟಿಆರ್‌ಪಿ ರೇಟ್‌ ಹೊರಬಿದ್ದಿದ್ದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.

ಪ್ರತಿವಾರವೂ ಧಾರವಾಹಿಗಳು ಒಂದೇ ರೀತಿಯ ಸ್ಥಾನವನ್ನು ಕಾಯ್ದಿರಿಸಿಕೊಳ್ಳುತ್ತಿತ್ತು. ಈ ಬಾರಿ ಅಚ್ಚರಿ ಬೆಳವಣಿಗೆ ಎಂಬಂತೆ ಟಾಪ್‌ ಸೀರಿಯಲ್‌ ಐದು, ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಇಂಟ್ರೆಸ್ಟಿಂಗ್ ಕಥೆಯೊಂದಿಗೆ ಬರುತ್ತಿರುವ ಅಮೃತಧಾರೆ ಸೀರಿಯಲ್ ಈ ಬಾರಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.  ಲಕ್ಷ್ಮೀ ನಿವಾಸ ಹಾಗೂ ಅಮೃತಧಾರೆ ಸೀರಿಯಲ್‌ಗಳು ವಿಭಿನ್ನ ಕಥೆ ಹಾಗೂ ನೈಜ ಅಭಿನಯದೊಂದಿಗೆ ಸೀರಿಯಲ್ ಪ್ರಿಯರ ಮನಸ್ಸನ್ನು ಗೆದ್ದುಕೊಂಡು ಟಿಆರ್‌ಪಿಯಲ್ಲಿ ಟಾಪ್‌ ರೇಟಿಂಗ್‌ನಲ್ಲಿದೆ.

ಇನ್ನೂ ಮೂರನೇ ಸ್ಥಾನವನ್ನು ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಪಡೆದುಕೊಂಡಿದೆ. ಇನ್ನೂ ಟಾಪ್‌ ರೇಟಿಂಗ್‌ನಲ್ಲಿದ್ದ ಪುಟ್ಟಕ್ಕನ ಮಕ್ಕಳು ಧಾರವಾಹಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಐದನೇ ಸ್ಥಾನದಲ್ಲಿ 'ಅಣ್ಣಯ್ಯ' ಧಾರಾವಾಹಿ ಹಾಗೂ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ  ಸ್ಥಾನ ಪಡೆದುಕೊಂಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜೈಲು ಸಿಬ್ಬಂದಿ ಬಳಿ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಕೇಳಿ ದರ್ಶನ್ ಮಾಡಿದ ಪ್ರತಿಜ್ಞೆಯೇನು ಗೊತ್ತಾ