Select Your Language

Notifications

webdunia
webdunia
webdunia
webdunia

ಮೊನ್ನೆ ಎಳೆದು ಕರೆದೊಯ್ದು ಪೋಲೀಸರಿಂದಲೇ ಈವತ್ತು ದರ್ಶನ್ ಮನೆಗೆ ಸೆಕ್ಯೂರಿಟಿ

Vijayalakshmi Darshan

sampriya

ಬೆಂಗಳೂರು , ಗುರುವಾರ, 31 ಅಕ್ಟೋಬರ್ 2024 (11:01 IST)
photo credit X
ಬೆಂಗಳೂರು: ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್‌ಗೆ ನಿನ್ನೆ ಮಧ್ಯಂತರ ಜಾಮೀನು ಅಡಿಯಲ್ಲಿ ಜೈಲಿಂದ್ದ ರಿಲೀಸ್‌ ಆಗಿದ್ದಾರೆ. ಇನ್ನೂ ದರ್ಶನ್‌ ಬಿಡುಗಡೆ ವಿಚಾರ ತಿಳಿದು ಅವರ ಅಭಿಮಾನಿಗಳು ಜೈಲಿನತ್ತ ದೌಡಾಯಿಸಿದ್ದಾರೆ. ಈ ವೇಳೆ ಸುತ್ತಾ ಮುತ್ತಾ ಬಿಗಿ ಭದ್ರತೆಯನ್ನು ಕೈಗೊಳ್ಳಲಾಯಿತು.

ಇನ್ನೂ ಹತ್ಯೆ ಪ್ರಕರಣದಲಿ ಅಂದು ಹೊಟೇಲ್‌ನಿಂದ ಎಳೆದು ಕರೆದೊಯ್ದ ಪೊಲೀಸರೇ ಇಂದು ಅವರ ಮನೆಗೆ ಬಿಗಿ ಸೆಕ್ಯೂರಿಟಿ ನೀಡುತ್ತಿದ್ದಾರೆ.

ಇನ್ನೂ ದರ್ಶನ್‌ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಅಭಿಮಾನಿಗಳು ಅವರ ವಾಹನವನ್ನು ಹಿಂಬಾಲಿಸಿ, ದರ್ಶನ್‌ ಪರ ಘೋಷಣೆ ಕೂಗಿದರು. ಇನ್ನೂ ರ್ಶನ್‌ ಅವರು ವಿಜಲಯಕ್ಷ್ಮಿ ಇರುವ ಅಪಾರ್ಟ್‌ಮೆಂಟ್‌ಗೆ ಹೋಗುವ ವಿಚಾರ ತಿಳಿದು ಅಲ್ಲಿಗೂ ಬಂದು ಡಿಬಾಸ್‌, ಡಿಬಾಸ್‌ ಎಂದು ಘೋಷಣೆ ಕೂಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರ ಸಾಹಸ ಪಟ್ಟರು. ಲಘು ಲಾಠಿ ಪ್ರಹಾರ ಮಾಡಿದ ಘಟನೆಯೂ ನಡೆಯಿತು.

ಈ ವೇಳೆ ಪುತ್ರ ವಿನೀಶ್‌ ದರ್ಶನ್‌ ಹೊರಗಡೆ ಬಂದು ದಯವಿಟ್ಟು ಯಾರೂ ಘೋಷಣೆ ಕೂಗಾಬೇಡಿ. ಕೋರ್ಟ್‌ನಿಂದ ನಮಗೆ ಸಮಸ್ಯೆಯಾಗುತ್ತದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಅದಲ್ಲದೆ ಆರ್‌ಆರ್‌ ನಗರದ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು, ದರ್ಶನ್‌ ಫೋಟೋ ಹಿಡಿದು ಘೋಷಣೆ ಕೂಗಿದ್ದಾರೆ. ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗ ವಿನೀಶ್‌ ಹುಟ್ಟುಹಬ್ಬ ಆಚರಿಸಿದ ಬೆನ್ನಲ್ಲೇ ದರ್ಶನ್‌ಗೆ ಚಿಕಿತ್ಸೆ