Publish Date: Wed, 30 Oct 2024 (16:54 IST)
Updated Date: Wed, 30 Oct 2024 (17:13 IST)
ಬಳ್ಳಾರಿ: ಬರೋಬ್ಬರಿ ೧೩೧ ದಿನಗಳ ಬಳಿಕ ನಟ ದರ್ಶನ್ ಅವರು ಇಂದು ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಾರೆ. ಈಗಾಗಲೇ ಜಾಮೀನು ಪ್ರತಿಯನ್ನು ಸುಶಾಂತ್ ನಾಯ್ಡು ಅವರು ಪೊಲೀಸರ ಕೈಗೆ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ದರ್ಶನ್ ಬಿಡುಗಡೆಯಾಗಲಿದ್ದಾರೆ.
ಇನ್ನೂ ಬಿಡುಗಡೆ ಹಿನ್ನೆಲೆ ಜೈಲಿನ ಸುತ್ತಾಮತ್ತಾ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಅಭಿಮಾನಿಗಳನ್ನು ಮತ್ತು ಜನಸಂದಣಿ ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಬಳ್ಳಾರಿ ಕೇಂದ್ರ ಕಾರಾಗೃಹದ ಬಳಿ ಭದ್ರತೆ ಹೆಚ್ಚಿಸಲಾಗಿದೆ.
ಬಳ್ಳಾರಿ ಜೈಲಿಗೆ ತೆರಳಲು ಎರಡು ಕಡೆಗಳಿಂದ ಪ್ರವೇಶವಿದೆ. ಒಂದು ದುರ್ಗಮ್ಮನ ಗುಡಿ ಕಡೆಯಿಂದ ಮತ್ತೊಂದು ಎಸ್‌ಪಿ ವೃತ್ತದಿಂದ. ಈ ಎರಡೂ ಪ್ರವೇಶಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಿದರು.
ತೀರ ಅಗತ್ಯವಿದ್ದವರಿಗಷ್ಟೇ ಈ ಮಾರ್ಗದಲ್ಲಿ ನಡೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಅಭಿಮಾನಿಗಳು, ಅನಗತ್ಯವಾಗಿ ಈ ಮಾರ್ಗವಾಗಿ ಓಡಾಡುವವರನ್ನು ಪೊಲೀಸರು ತಡೆಯುತ್ತಿದ್ದಾರೆ.