Publish Date: Thu, 31 Oct 2024 (10:33 IST)
Updated Date: Thu, 31 Oct 2024 (10:37 IST)
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ನಿನ್ನೆ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ, ಬಿಗಿ ಭದ್ರತೆಯಲಿ ಪತ್ನಿ ವಿಜಯಲಕ್ಷ್ಮಿ ಪ್ಲ್ಯಾಟ್‌ಗೆ ಬಂದಿದ್ದಾರೆ.
ತೀವ್ರ ಬೆನ್ನುನೋವಿಗೆ ಚಿಕಿತ್ಸೆ ದೃಷ್ಟಿಯಿಂದ ದರ್ಶನ್‌ಗೆ ಮಧ್ಯಂತರ ಜಾಮೀನು ನ್ಯಾಯಾಲಯ ನೀಡಿದೆ. ದರ್ಶನ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದ ಹಾಗೇ ಅಭಿಮಾನಿಗಳು ಹರ್ಷೊದ್ಘಾರ ಮುಗಿಲು ಮುಟ್ಟತು. ದಾರಿಯುದ್ದಕ್ಕೂ ದರ್ಶನ್ ವಾಹನ ಫಾಲೋ ಮಾಡಿ, ಡಿಬಾಸ್ ಡಿಬಾಸ್ ಎಂದು ಘೋಷಣೆ ಕೂಗಿದರು. ಈ ವೇಳೆ ದರ್ಶನ್ ಅಭಿಮಾನಿಗಳತ್ತ ಕೈ ಬೀಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ದರ್ಶನ್ ಅವರು ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ಬರ್ತಿದ್ದಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಸಂಭ್ರಮಾಚರಣೆ ಮಾಡಿದರು. `ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಹಾಕಿದರು.
ಈ ವೇಳೆ ದರ್ಶನ್ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿಲೇಬೇಕಾದ ಪರಿಸ್ಥಿತಿ ಎದುರಾಯಿತು. ಪುತ್ರ ವಿನೀಶ್ ಹುಟ್ಟುಹಬ್ಬ ಆಚರಿಸಿದ ಬೆನ್ನಲ್ಲೇ ದರ್ಶನ್ ಅವರು ಬೆನ್ನುನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ.