Select Your Language

Notifications

webdunia
webdunia
webdunia
webdunia

ನಟ ದರ್ಶನ್‌ ಜೈಲಿನಿಂದ ರಿಲೀಸ್, ಪತಿಯ ಬರುವಿಕೆಗಾಗಿ ಕಾರಿನಲ್ಲೇ ಕೂತಾ ವಿಜಯಲಕ್ಷ್ಮಿ

Actor Darshan Released

sampriya

ಬೆಂಗಳೂರು , ಬುಧವಾರ, 30 ಅಕ್ಟೋಬರ್ 2024 (18:36 IST)
photo credit X
ಬಳ್ಳಾರಿ: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲಿ 131ದಿನಗಳ ಜೈಲುವಾಸ ಅನುಭವಿಸಿ ಇದೀಗ ಮಧ್ಯಂತರ ಜಾಮೀನು ಅಡಿಯಲ್ಲಿ ದರ್ಶನ್‌ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. 

ಜಾಮೀನು ಪ್ರತಿ ಜೈಲು ಅಧಿಕಾರಿಗಳಿಗೆ ಸಿಕ್ಕ ಬೆನ್ನಲ್ಲೇ ದರ್ಶನ್‌ ಅವರನ್ನು ರಿಲೀಸ್‌ ಮಾಡಲಾಗಿದೆ.
ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್‌ಗೆ ಆರೋಗ್ಯದ ದೃಷ್ಟಿಯಿಂದ ಚಿಕಿತ್ಸೆಗಾಗಿ ಬೇಲ್‌ ಸಿಕ್ಕಿದೆ.

5 ತಿಂಗಳುಗಳ ಕಾನೂನು ಸಮರ ನಂತರ ಇಂದು ದರ್ಶನ್ ಬಿಡುಗಡೆಯಾಗಿದ್ದಾರೆ. ಈ ವೇಳೆ, ದರ್ಶನ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ದರ್ಶನ್‌ ಅಭಿಮಾನಿಗಳು ಜೈಲಿನ ಬಳಿ ಬಂದಿದ್ದಾರೆ. ದರ್ಶನ್‌ ಕರೆದುಕೊಂಡು ಹೋಗಲು ಪತನಿ ವಿಜಯಲಕ್ಷ್ಮಿ ಹಾಗೂ ಆಪ್ತ ಸುಶಾಂತ್‌ ನಾಯ್ದು ಅವರು ಜೈಲಿಗೆ ಬಂದಿದ್ದರು.

ಅಂದಹಾಗೆ, ಜೂನ್ 11ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ಜೈಲಿನಿಂದ ಬಿಡುಗಡೆಯಾಗುತ್ತಿರುವುದೇ ದೀಪಾವಳಿ: ಸಂಜನಾ ಗಲ್ರಾನಿ ಫುಲ್‌ ಖುಷ್