Select Your Language

Notifications

webdunia
webdunia
webdunia
webdunia

ತಾರಕಾಸುರ ಚಿತ್ರದ ಬಿಡುಗಡೆಗೆ ಎದುರಾಗಿದೆ ಕಂಟಕ

ತಾರಕಾಸುರ ಚಿತ್ರದ ಬಿಡುಗಡೆಗೆ ಎದುರಾಗಿದೆ ಕಂಟಕ
ಬೆಂಗಳೂರು , ಶುಕ್ರವಾರ, 23 ನವೆಂಬರ್ 2018 (07:23 IST)
ಬೆಂಗಳೂರು : ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರಕ್ಕೆ ಇದೀಗ ಬುಡುಬುಡುಕೆ ಗೋಂದಳಿ ಸಮಾಜದಿಂದ ವಿರೋಧ ವ್ಯಕ್ತವಾಗಿದೆ.


ಹೌದು. ನಟ ವೈಭವ್​ ಹಾಗೂ ನಟಿ ಮಾನ್ವಿತಾ ಹರೀಶ್ ಜೋಡಿಯಾಗಿ ನಟಿಸಿರುವ ತಾರಕಾಸುರ ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಆದರೆ ಈ ಸಿನಿಮಾ ಬುಡುಬುಡುಕೆ ಶಾಸ್ತ್ರ ಹೇಳುವ ವ್ಯಕ್ತಿಗೆ ಸಂಬಂಧಪಟ್ಟ ಸಿನಿಮವಾಗಿದ್ದರಿಂದ ಬುಡುಬುಡುಕೆ ಗೋಂದಳಿ ಸಮಾಜ ಚಿತ್ರದ ಬಿಡುಗಡೆಗೆ ಅಡ್ಡಗಾಲು ಹಾಕಿದೆ.


ಚಿತ್ರವನ್ನು ಮೊದಲು ನಮಗೆ ತೋರಿಸಿ. ಸಿನಿಮಾ ತೋರಿಸದೇ ಹೋದರೆ ಕೋರ್ಟ್ ಮೆಟ್ಟಿಲೇರಲು ಬುಡುಬುಡುಕೆ ಗೊಂದಳಿ ಸಮಾಜ ನಿರ್ಧಾರ ಮಾಡಿದೆ. ಚಿತ್ರತಂಡ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಈ ವಾರ ಸಿನಿಮಾ ಬಿಡುಗಡೆಯಾಗುವುದಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಸಂಘದ ಅಧ್ಯಕ್ಷ ಕರಿಯಪ್ಪ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಫ್ ಅಲಿ ಖಾನ್-ಕರೀನಾ ಪುತ್ರ ತೈಮೂರ್ ನ ಫೋಟೋ ಬೆಲೆ ಎಷ್ಟು ಗೊತ್ತಾ?