Publish Date: Thu, 22 Nov 2018 (07:19 IST)
Updated Date: Thu, 22 Nov 2018 (07:20 IST)
ಬೆಂಗಳೂರು : ಬೆಂಗಳೂರು ನಗರದ ಕೋರಮಂಗಲದಲ್ಲಿರುವ ಬ್ರೈಲಿ ಪಬ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವತಿ ತನ್ನ ಸ್ನೇಹಿತರ ಜೊತೆ ರಾತ್ರಿ ಪಬ್ಗೆ ತೆರಳಿದ್ದಳು. ಆಗ ವಾಶ್ ರೂಂ ಗೆ ತೆರಳಿದ ಆಕೆಯ ಜೊತೆ ಅಪರಿಚಿತ ವ್ಯಕ್ತಿವೋರ್ವ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ಕೂಗಿಕೊಂಡರೂ ಆಕೆಯನ್ನು ಬಿಟ್ಟಿರಲಿಲ್ಲ. ಕೊನೆಗೆ ಸ್ನೇಹಿತರು ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ನೊಂದ ಯುವತಿ ಕೋರಮಂಗಲ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪಬ್ನಲ್ಲಿದ್ದ ಸಿಸಿಟಿವಿ ಆಧರಿಸಿ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.