Publish Date: Tue, 03 Nov 2020 (11:37 IST)
Updated Date: Tue, 03 Nov 2020 (11:40 IST)
ಹೈದರಾಬಾದ್ : ಕೊರೊನಾ ಹಿನ್ನಲೆಯಲ್ಲಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡ ಕಾರಣ ಹಲವು ಸೆಲೆಬ್ರಿಟಿಗಳ ವಿವಾಹ ನಡೆದಿದೆ. ಅದೇರೀತಿ ತೆಲುಗು ಚಿತ್ರ ನಟ ರಾಜಾ ಚೆಂಬೋಲು ಅವರು ಕೂಡ ಇತ್ತೀಚೆಗೆ ಹಸೆಮಣೆ ಏರಿದ್ದಾರೆ.
ಗೀತರಚನೆಕಾರ ಶ್ರೀನಿವಾಸಲು ಸೀತಾರಾಮ್ ಶಾಸ್ತ್ರಿ ಅವರ ಕಿರಿಯ ಮಗನಾದ ನಟ ರಾಜಾ ಚೆಂಬೋಲು ಅಕ್ಟೋಬರ್ 31ರಂದು ಹಿಮಾ ಬಿಂದು ಎಂಬುವವರ ಜೊತೆ ಹೈದರಾಬಾದ್ ನಲ್ಲಿ ವಿವಾಹವಾಗಿದ್ದಾರೆ. ನವದಂಪತಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ನಟ ರಾಜಾ ಚೆಂಬೋಲು ಅವರು ಫಿದಾ, ನಾ ಪೆರು ಸೂರ್ಯ, ಅಗ್ನಾಥವಾಸಿ, ಆಂತರಿಕ್ಷಮ್, ಚಾಣಕ್ಯ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.