Publish Date: Fri, 11 Sep 2020 (10:13 IST)
Updated Date: Fri, 11 Sep 2020 (10:16 IST)
ಚೆನ್ನೈ : ತಮಿಳಿನ ಹಾಸ್ಯ ನಟ ವಡಿವೇಲ್ ಬಾಲಾಜಿ(45) ಗುರುವಾರ ಹೃದಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.
ಹೃದಯ ಸ್ತಂಭನದಿಂದ ಬಳಲುತ್ತಿದ್ದ ಅವರನನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಇವರು ತಮಿಳಿನ ಸ್ಟಾರ್ ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅಧು ಇಧು ಎಧು ಮತ್ತು ಕಲಕಪೋವದು ಯಾರೂ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದರು.