Publish Date: Tue, 29 Sep 2020 (22:06 IST)
Updated Date: Tue, 29 Sep 2020 (22:08 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಅಭಿಮಾನಿಗಳು ಹಾಗೂ ತನಿಖಾಧಿಕಾರಿಗಳಿಗೆ ಅನುಮಾನಗಳು ದಟ್ಟವಾಗುತ್ತಲೆ ಸಾಗಿವೆ.
ಈ ನಡುವೆ ಕೂಪರ್ ಆಸ್ಪತ್ರೆ ಮಾಡಿರುವ ಮರಣೋತ್ತರ ಪರೀಕ್ಷೆಯ ಬಗ್ಗೆ ಏಮ್ಸ್ ಸಂಶೋಧನೆಗಳು ಅನುಮಾನ ವ್ಯಕ್ತಪಡಿಸಿವೆ ಎನ್ನಲಾಗುತ್ತಿದೆ.
ಏಮ್ಸ್ ಸಂಶೋಧನೆಗಳು ನಟನ ಸಾವಿನ ಸಮಯ ಏಕೆ ಕಾಣೆಯಾಗಿರೋದು ಮತ್ತು ಶವಪರೀಕ್ಷೆ ಕೋಣೆಯಲ್ಲಿ ಬೆಳಕಿನ ಕೊರತೆ ಸೇರಿದಂತೆ ಮುಂತಾದ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿರುವುದು ಹೊಸ ಚರ್ಚೆಗೆ ಕಾರಣವಾಗುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಅಭಿಮಾನಿಗಳಿಗೆ ಅನೇಕ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತಿದೆ. ಈ ನಡುವೆ ಏಮ್ಸ್ ತನ್ನ ವರದಿಯನ್ನು ಸಿಬಿಐಗೆ ನೀಡಿದೆ ಎಂಬ ಸುದ್ದಿ ಇದೆ.