Publish Date: Tue, 29 Sep 2020 (16:24 IST)
Updated Date: Tue, 29 Sep 2020 (16:25 IST)
ಹೆಣ್ಣುಮಕ್ಕಳನ್ನು ಮಾನಭಂಗ ಮಾಡುವವರನ್ನು ಶೂಟ್ ಮಾಡಬೇಕು. ಹೀಗಂತ ಬಾಲಿವುಡ್ ನಟಿ ಹೇಳಿದ್ದಾರೆ.
ಹತ್ರಾಸ್ ನಲ್ಲಿ ನಡೆದಿದ್ದ ಸಾಮೂಹಿಕ ಮಾನಭಂಗ ಕೇಸ್ ಸಂತ್ರಸ್ತೆಯ ನಿಧನದ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.
ಸ್ವಜನ ಪಕ್ಷಪಾತದಿಂದ ಹಿಡಿದು ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ನಟಿ ಕಂಗನಾ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಮಾನಭಂಗ ಮತ್ತು ಹಲ್ಲೆಗೆ ಒಳಗಾದ 19 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಈ ಕುರಿತು ನಟಿ ಕಂಗನಾ ಟ್ವಿಟ್ ಮಾಡಿದ್ದು, '' ಈ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶೂಟ್ ಮಾಡಿ, ಪ್ರತಿವರ್ಷ ಹೆಚ್ಚುತ್ತಿರುವ ಈ ಸಾಮೂಹಿಕ ದುಷ್ಕರ್ಮಿಗಳ ಕೃತ್ಯಗಳಿಗೆ ಏನು ಪರಿಹಾರ? ಈ ದೇಶಕ್ಕೆ ಎಂತಹ ದುಃಖ ಮತ್ತು ಅವಮಾನಕರ ದಿನ ಎಂದು ತಿಳಿಸಿದ್ದಾರೆ.