ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಅನ್ನಾತೆ ಮತ್ತು ಅಕ್ಷಯ್ ಕುಮಾರ್ ನಾಯಕರಾಗಿರುವ ಸೂರ್ಯವಂಶಿ ಸಿನಿಮಾ ಒಂದೇ ಸಮಯದಲ್ಲಿ ಬಿಡುಗಡೆಯಾಗಿತ್ತು. ಈ ಪೈಕಿ ಬಾಕ್ಸ್ ಆಫೀಸ್ ನಲ್ಲಿ ಯಾವ ಸಿನಿಮಾ ಮೇಲುಗೈ ಸಾಧಿಸಿದೆ ನೋಡೋಣ.
ರಜನಿ ಅಭಿನಯದ ಅನ್ನಾತೆ ದಸರಾ ಸಮಯದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ 13 ದಿನಗಲ್ಲಿ 225 ಕೋಟಿ ರೂ. ಬಾಚಿಕೊಂಡಿದೆ. ದಸರಾ ಜೊತೆಗೆ ದೀಪಾವಳಿ ರಜೆ ಸಿನಿಮಾ ಗಳಿಕೆಗೆ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು, ಸೂರ್ಯವಂಶಿ ವಿಷಯಕ್ಕೆ ಬರುವುದಾದರೆ, ಈ ಸಿನಿಮಾ ಬಿಡುಗಡೆಯಾಗಿ 12 ದಿನ ಕಳೆದ ಮೇಲೆ ಕಲೆಕ್ಷನ್ ಮಾಡಿದ್ದ ಬರೋಬ್ಬರಿ 250 ಕೋಟಿ ರೂ. ಈ ಮೂಲಕ ಲಾಕ್ ಡೌನ್ ನಿಂದ ತತ್ತರಿಸಿದ್ದ ಬಾಲಿವುಡ್ ಗೆ ಅಕ್ಷಯ್ ಸಿನಿಮಾ ಎರಡನೇ ಬಾರಿಗೆ ಚೇತರಿಕೆ ನೀಡಿದೆ. ಇದಕ್ಕೂ ಮೊದಲು ಅಕ್ಷಯ್ ಅಭಿನಯಿಸಿದ್ದ ಬೆಲ್ ಬಾಟಂ ಸಿನಿಮಾ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡಿತ್ತು.