Publish Date: Fri, 29 Oct 2021 (09:18 IST)
Updated Date: Fri, 29 Oct 2021 (09:18 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಿನ್ನೆ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ.
ಆದರೆ ಆತಂಕಪಡಬೇಕಾಗಿಲ್ಲ, ಮಾಮೂಲು ಚೆಕಪ್ ಗಾಗಿ ಅವರು ನಿನ್ನೆ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಮೊನ್ನೆಯಷ್ಟೇ ದೆಹಲಿಯಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದ ರಜನಿ ತವರಿಗೆ ಮರಳಿದ್ದರು. ಅವರಿಗೆ ಹೃದಯ ಸಂಬಂಧೀ ತೊಂದರೆಯಿರಬಹುದು ಎಂದು ಊಹಾಪೋಹಗಳು ಎದ್ದಿವೆ. ಇದರ ಬೆನ್ನಲ್ಲೇ ಆಸ್ಪತ್ರೆ ಮೂಲಗಳು ಇದನ್ನು ತಳ್ಳಿ ಹಾಕಿದ್ದು ಇದು ಮಾಮೂಲು ಚೆಕಪ್ ಎಂದಿದ್ದಾರೆ.