Publish Date: Thu, 29 Oct 2020 (08:13 IST)
Updated Date: Thu, 29 Oct 2020 (08:22 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ, ನಟ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇದೀಗ ಈ ಬಗ್ಗೆ ಸೂರ್ಯ ಮತ್ತು ವಿಜಯ್ ಅಭಿಮಾನಿಗಳ ನಡುವೆ ಘರ್ಷಣೆ ನಡೆಯುತ್ತಿದೆ ಎನ್ನಲಾಗಿದೆ.
ಹೌದು. ‘ಸೂರರೈ ಪೊಟ್ರು’ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 10.24 ಮಿಲಿಯನ್ ವೀವ್ಸ್ ಹಾಗೂ 471ಕೆ. ಶೇರ್ ಆಗಿದ್ದು, ಟ್ರೆಂಡಿಂಗ್ ಆಗಿದೆ.
ಆದರೆ ವಿಜಯ್ ಅಭಿನಯದ ಬೀಗಲ್ ಚಿತ್ರದ ಟ್ರೈಲರ್ 24 ಗಂಟೆಗಳಲ್ಲಿ 18.3 ಮಿಲಿಯನ್ ವೀವ್ಸ್ ಹಾಗೂ 1.6 ಮಿಲಿಯನ್ ಲೈಕ್ಸ್ ಪಡೆದಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ಸೂರ್ಯ ಮತ್ತು ವಿಜಯ್ ಅಭಿಮಾನಿಗಳು ಘರ್ಷಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.