Select Your Language

Notifications

webdunia
webdunia
webdunia
webdunia

ಖ್ಯಾತ ನಟಿ, ರಾಜಕಾರಿಣಿ ಖುಷ್ಬೂ ಅರೆಸ್ಟ್!

ಖ್ಯಾತ ನಟಿ, ರಾಜಕಾರಿಣಿ ಖುಷ್ಬೂ ಅರೆಸ್ಟ್!
ಚೆನ್ನೈ , ಬುಧವಾರ, 28 ಅಕ್ಟೋಬರ್ 2020 (08:41 IST)
ಚೆನ್ನೈ : ಚಿದಂಬರಂ ನಲ್ಲಿ ಪ್ರತಿಭಟಿಸಲು ಮುಂದಾದ ಖ್ಯಾತ ನಟಿ, ರಾಜಕಾರಿಣಿ ಖುಷ್ಬೂ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ನಾಯಕ ತಿರುಮಾವಾಲವನ್ ಅವರ ಬೆಂಬಲಿಗರು ಹಿಂದೂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ತಿರುಮಾವಾಲವನ್ ಅವರ ಸ್ವಂತ ಕ್ಷೇತ್ರವಾದ ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಮಹಿಳಾ ವಿಭಾಗ ನಿರ್ಧಾರ ಮಾಡಿದೆ.

ಹಾಗಾಗಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿಕೊಂಡು ನಟಿ ಖುಷ್ಬು ಈ ಪ್ರತಿಭಟನೆಯಲ್ಲಿ ಸೇರಿಕೊಳ್ಳಲು ನಿನ್ನೆ ಮುಂಜಾನೆ ಚಿದಂಬರಂಗೆ ತೆರಳಿದ್ದಾರೆ. ಆ ವೇಳೆ ಪೊಲೀಸರು ಅವರ ಕಾರನ್ನು ಮುತ್ತುಕಾಡು ಬಳಿ ನಿಲ್ಲಿಸಿ ಖುಷ್ಬೂ ಮತ್ತು ಇತರರನ್ನು ಬಂಧಿಸಿದ್ದಾರೆ. ಈ ಬಗ್ಗೆ ನಟಿ ಖುಷ್ಬೂ ಅವರು ಟ್ವೀಟರ್ ನಲ್ಲಿ ಫೋಟೊವೊಂದನ್ನು ಪೋಸ್ಟ್ ಮಾಡಿ ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ; 3 ಪ್ರಮುಖ ಗಣ್ಯರ ಸ್ಪರ್ಧೆ