Select Your Language

Notifications

webdunia
webdunia
webdunia
webdunia

‘ಸೂರರೈ ಪೊಟ್ರು’ ಚಿತ್ರದ ಈ ದೃಶ್ಯವನ್ನು ಮರ್ಸಲ್ ಚಿತ್ರದಿಂದ ನಕಲು ಮಾಡಲಾಗಿದೆಯಂತೆ

‘ಸೂರರೈ ಪೊಟ್ರು’ ಚಿತ್ರದ ಈ ದೃಶ್ಯವನ್ನು ಮರ್ಸಲ್ ಚಿತ್ರದಿಂದ ನಕಲು ಮಾಡಲಾಗಿದೆಯಂತೆ
ಚೆನ್ನೈ , ಬುಧವಾರ, 28 ಅಕ್ಟೋಬರ್ 2020 (09:38 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ, ನಟ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಸೂರರೈ ಪೊಟ್ರು’ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 10.24 ಮಿಲಿಯನ್ ವೀವ್ಸ್ ಹಾಗೂ 471ಕೆ. ಶೇರ್ ಆಗಿದ್ದು, ಟ್ರೆಂಡಿಂಗ್ ಆಗಿದೆ. ಇದಲ್ಲದೇ ಚಿತ್ರದ ಬಿಡುಗಡೆ ಮುಂದೂಡಲಾಗಿದ್ದು, ಪ್ರಸ್ತುತ ಚಿತ್ರವು ಅಮೆಜಾನ್ ಪ್ರೈಮ್ ನಲ್ಲಿ ನವೆಂಬರ್ 12 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ನಡುವೆ ಇದೀಗ ಚಿತ್ರದ ಟ್ರೈಲರ್ ನ ಒಂದು ದೃಶ್ಯವನ್ನು ಮರ್ಸಲ್  ಚಿತ್ರದಿಂದ ನಕಲಿ ಮಾಡಲಾಗಿದೆ ಎಂದು ಕೆಲವು ಅಭಿಮಾನಿಗಳು ಟ್ವೀಟರ್ ನಲ್ಲಿ ಫೋಸ್ಟ್ ಮಾಡುತ್ತಿದ್ದಾರೆ. ಮರ್ಸಲ್ ಚಿತ್ರದ ಎಂಜಿಆರ್ ಚಿತ್ರದ ಸಂದರ್ಭದಲ್ಲಿ ವಿಜಯ್ ಚಿತ್ರಮಂದಿರಕ್ಕೆ ಪ್ರವೇಶಿಸಲಿದ್ದಾರೆ. ಅದೇರೀತಿ ಈ ಟ್ರೈಲರ್ ನಲ್ಲಿ ರಜನೀಕಾಂತ್ ಅವರ ಚಿತ್ರ ನಡೆಯುತ್ತಿರುವಾಗ ಸೂರ್ಯ ಚಿತ್ರಮಂದಿರಕ್ಕೆ  ಪ್ರವೇಶಿಸುತ್ತಾರೆ.  ಕೆಲವು ಅಭಿಮಾನಿಗಳು ಇದನ್ನು ಕಾಫಿ ಕುಡಿಯುವ ದೃಶ್ಯವೆಂದು ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಸರದಲ್ಲಿ ರಾಬರ್ಟ್ ರಿಲೀಸ್ ಆಗಲ್ಲ: ದರ್ಶನ್