Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ತೆಲುಗು ನಟಿ ಮಾಲ್ವಿ ಮಲ್ಹೋತ್ರಾಗೆ ಚಾಕುವಿನಿಂದ ಇರಿದ ನಿರ್ಮಾಪಕ

ಈ ಕಾರಣಕ್ಕೆ ತೆಲುಗು ನಟಿ ಮಾಲ್ವಿ ಮಲ್ಹೋತ್ರಾಗೆ ಚಾಕುವಿನಿಂದ ಇರಿದ ನಿರ್ಮಾಪಕ
ಹೈದರಾಬಾದ್ , ಗುರುವಾರ, 29 ಅಕ್ಟೋಬರ್ 2020 (08:09 IST)
ಹೈದರಾಬಾದ್ : ತೆಲುಗು ನಟಿ ಮಾಲ್ವಿ ಮಲ್ಹೋತ್ರಾ ಅವರು ನಿರ್ಮಾಪಕನಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟಿ ಮಾಲ್ವಿ ಮಲ್ಹೋತ್ರಾ ಅವರು ತೆಲುಗು ಚಿತ್ರ ಕುಮಾರಿ 18 ಪ್ಲಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ  ಮಾಡಿದ್ದರು. ಅವರು ಕೆಲವು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ.

ಇವರು ಚಿತ್ರ ಅವಕಾಶಕ್ಕಾಗಿ  ನಿರ್ಮಾಪಕ ಯೋಗೆಶ್ ಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ನಿರ್ಮಾಪಕ ಯೋಗೆಶ್ ಕುಮಾರ್ ಮದುವೆಯಾಗಲು ನಟಿಗೆ ಕಿರುಕುಳ ನೀಡಿದ್ದರಿಂದ ಅವರಿಂದ ದೂರವಾಗಿದ್ದಾರೆ. ಇದರಿಂದ ಕೋಪಗೊಂಡ ನಿರ್ಮಾಪಕ ನಟಿಗೆ ಚಾಕುವಿನಿಂದ 4 ಬಾರಿ ಇರಿದಿದ್ದಾರೆ. ಇದರಿಂದ ಗಾಯಗೊಂಡ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ತಿಳಿದುಬಂದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜಲ್ ಅಗರ್ ವಾಲ್ ರಿವೀಲ್ ಮಾಡಿದ್ದು ಯಾವ ಫೋಟೊ ಗೊತ್ತಾ?