Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ಮುಂದಿನ ಸಿನಿಮಾ ಘೋಷಣೆ; ಹೈ-ವೋಲ್ಟೇಜ್ ಪಾತ್ರದಲ್ಲಿ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ಮುಂದಿನ ಸಿನಿಮಾ ಘೋಷಣೆ; ಹೈ-ವೋಲ್ಟೇಜ್ ಪಾತ್ರದಲ್ಲಿ ಪವನ್ ಕಲ್ಯಾಣ್
ಹೈದರಾಬಾದ್ , ಬುಧವಾರ, 28 ಅಕ್ಟೋಬರ್ 2020 (10:31 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ  ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಅವರ  ಮುಂದಿನ ಸಿನಿಮಾ ಘೋಷಣೆಯಾಗಿದೆ.

ಸೀತಾರಾ ಎಂಟರ್ಟೈನ್ ಮೆಂಟ್ ನ ಸೂರ್ಯದೇವರ ನಾಗವಂಶಿ ಈ ಸಿನಿಮಾ ನಿರ್ಮಿಸಲಿದ್ದು, ಎಸ್ ತಮನ್ ಸಂಗೀತ ಸಂಯೋಜಿಸಲಿದ್ದಾರೆ. ಸಾದ್ ಮುರೆಲ್ಲಾ ಅವರ ಛಾಯಗ್ರಹಣದೊಂದಿಗೆ ಮನರಂಜನೆ ನವೀನ್ ನೂಲಿಯ ಮತ್ತು ಎಎಸ್ ಪ್ರಕಾಶ್ ಅವರ ಕಲಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನಲಾಗಿದೆ.

ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಬಿಡುಗಡೆಯಾದ ವಿಡಿಯೋ ಕ್ಲಿಪ್ ನಲ್ಲಿ ತಯಾರಕರು ಪವನ್ ಅವರನ್ನು ‘ಕಿಂಗ್ ಆಫ್ ಆಟಿಟ್ಯೂಡ್’ ಎಂದು ಹಾಗೂ ತೆಲುಗು ಚಿತ್ರರಂಗದ ನೆಚ್ಚಿನ ಕಾಪ್ ಹೈ-ವೋಲ್ಟೇಜ್ ಪಾತ್ರ ಮಾಡಲಿದ್ದಾರೆ ಎಂದು ಬಣ್ಣಿಸಿದ್ದಾರೆ. ಹಾಗೇ ಈ ಚಿತ್ರವು ಮಲಯಾಳಂನ ‘ಅಯ್ಯಪ್ಪನೂಮ್ ಕೋಶಿಯಮ್’ ನ ರಿಮೇಕ್ ಎಂಬ ವದಂತಿ ಇದೆ. ಇನ್ನೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

‘ಸೂರರೈ ಪೊಟ್ರು’ ಚಿತ್ರದ ಈ ದೃಶ್ಯವನ್ನು ಮರ್ಸಲ್ ಚಿತ್ರದಿಂದ ನಕಲು ಮಾಡಲಾಗಿದೆಯಂತೆ