Publish Date: Wed, 28 Oct 2020 (09:59 IST)
Updated Date: Wed, 28 Oct 2020 (10:03 IST)
ಮುಂಬೈ: ಐಪಿಎಲ್ ನಲ್ಲಿ, ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ರನ್ ಗಳಿಸಿದರೂ ಟೀಂ ಇಂಡಿಯಾಕ್ಕೆ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಆಯ್ಕೆಯಾಗದ ಬಗ್ಗೆ ಹಿರಿಯ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಗೆ ಅನ್ಯಾಯವಾಗಿದೆ. ಈ ಯುವ ಕ್ರಿಕೆಟಿಗನನ್ನು ಆಯ್ಕೆ ಮಾಡದೇ ಇರುವುದು ಯಾಕೆ ಎಂಬ ಬಗ್ಗೆ ಬಿಸಿಸಿಐ ಅಧ‍್ಯಕ್ಷ ಗಂಗೂಲಿ ತನಿಖೆ ಮಾಡಲಿ ಎಂದು ವೆಂಗ್ಸರ್ಕಾರ್ ಆಗ್ರಹಿಸಿದ್ದಾರೆ. ಅವರು ಸರಾಗವಾಗಿ ರನ್ ಗಳಿಸಿದ್ದಾರೆ. ಪ್ರಸಕ್ತ ದೇಶದ ಅತ್ಯುತ್ತಮ ಯುವ ಕ್ರಿಕೆಟಿಗ. ಅವರನ್ನೇ ತಂಡದಿಂದ ಹೊರಗಿಟ್ಟಿರುವುದು ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.