Publish Date: Wed, 05 May 2021 (10:09 IST)
Updated Date: Wed, 05 May 2021 (10:10 IST)
ಮಂಡ್ಯ: ಕೊರೋನಾ ಪ್ರಕರಣಗಳು ಮಿತಿ ಮೀರುತ್ತಿದ್ದರೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಸ್ವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಕೆಲವು ಟೀಕೆಗಳಿಗೆ ಅವರು ಪ್ರತ್ಯುತ್ತರ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯದಲ್ಲಿ ತಾವು ಕೊರೋನಾ ನಿಯಂತ್ರಣಕ್ಕಾಗಿ ಕೈಗೊಂಡ ಕೆಲಸಗಳ ಸುದೀರ್ಘ ಪಟ್ಟಿಯನ್ನು ಸುಮಲತಾ ಪ್ರಕಟಿಸಿದ್ದಾರೆ.
ಒಬ್ಬ ಸಂಸದೆಯಾಗಿ ಮಂಡ್ಯ ಸಂಸದೆಯಾಗಿ ಹಾಗೂ ವೈಯಕ್ತಿಕ ನೆಲೆಯಲ್ಲಿ ಮಾಡಬಹುದಾದ ಕೆಲಸ ಮಾಡುತ್ತಿದ್ದೇನೆ. ಮಂಡ್ಯ ಜಿಲ್ಲೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಒದಗಿಸುವ ಕೆಲಸ ಜಾರಿಯಲ್ಲಿದೆ. ಇದು ರಾಜಕೀಯ ಮಾಡುವ ಸಮಯವಲ್ಲ. ಒಗ್ಗೊಟ್ಟಾಗಿ ಈ ಪಿಡುಗನ್ನು ಕೊನೆಗಾಣಿಸೋಣ ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ.