Select Your Language

Notifications

webdunia
webdunia
webdunia
webdunia

ಶಂಕಿತರಾಗಿ ಹೋಗಿ ಸೋಂಕಿತರಾಗಿ ಬರುತ್ತಿರುವ ಜನ!

ಶಂಕಿತರಾಗಿ ಹೋಗಿ ಸೋಂಕಿತರಾಗಿ ಬರುತ್ತಿರುವ ಜನ!
ಬೆಂಗಳೂರು , ಬುಧವಾರ, 5 ಮೇ 2021 (09:26 IST)
ಬೆಂಗಳೂರು: ಕೊರೋನಾ ಶಂಕಿತರಾಗಿ ಪರೀಕ್ಷಿಸಲು ಹೋಗಿ ಜನ ಸೋಂಕಿತರಾಗಿ ಹೊರಬರುವಂತಾಗಿದೆ. ಇದು ಬೆಂಗಳೂರಿನ ಸದ್ಯದ ಪರಿಸ್ಥಿತಿ.


ದಾಖಲೆಗಾಗಿಯೋ, ಕೊರೋನಾ ಲಕ್ಷಣಗಳಿರುವ ಕಾರಣಕ್ಕೋ ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷಿಸಲು ಹೋಗಿ ಗಂಟೆಗಟ್ಟಲೆ ಕಾಯುವ ಮಂದಿ ಕೊನೆಗೆ ಇಲ್ಲದ ಅಪಾಯವನ್ನು ಮೈಮೇಲೆಳೆದುಕೊಳ್ಳುತ್ತಿದ್ದಾರೆ.

ಸರ್ಕಾರಿ ಲ್ಯಾಬ್ ಗಳಲ್ಲಿ, ಬಿಬಿಎಂಪಿ ಕಚೇರಿಗಳಲ್ಲಿ ಕೊರೋನಾ ಉಚಿತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದನ್ನು ಪಡೆಯಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇದರಿಂದಾಗಿ ಹಲವರು ಸೋಂಕು ಇಲ್ಲದೇ ಇದ್ದರೂ ತಗುಲಿಸಿಕೊಂಡು ಬರುವ ಪರಿಸ್ಥಿತಿಯಾಗಿದೆ. ಆದಷ್ಟು ಜನನಿಬಿಡ ಪ್ರದೇಶಗಳಲ್ಲಿ ಸೇರಬಾರದು, ಗುಂಪು ಸೇರಬಾರದು ಎಂದು ಸರ್ಕಾರವೇ ನಿಯಮ ರೂಪಿಸಿದರೂ ಅನಿವಾರ್ಯವಾಗಿ ಜನರು ಕೊರೋನಾ ಪರೀಕ್ಷೆಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವುದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯ ಬೆಡ್ ಬುಕಿಂಗ್ ದಂಧೆ ತನಿಖೆ ಸಿಬಿಐಗೆ