ಬೆಂಗಳೂರು: ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಈ ದಂಧೆಯನ್ನು ಬಯಲಿಗೆ ಎಳೆದಿದ್ದರು. ಇದೀಗ ಬಿಬಿಎಂಪಿ ಪೋರ್ಟಲ್ ಮೂಲಕ ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ವಿಧಾನದಲ್ಲಿ ಅಕ್ರಮ ಎಸಗಿದವರ ವಿರುದ್ಧ ಸಿಬಿಐ ತನಿಖೆ ನಡೆಯಲಿದೆ.
ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದೆಡೆ ಕೊರೋನಾ ರೋಗಿಗಳು ಬೆಡ್ ಇಲ್ಲವೆಂದು ಪರದಾಡುತ್ತಿರಬೇಕಾದರೆ, ಅಧಿಕಾರಿಗಳು ಹಣ ಮಾಡುವ ದಂಧೆಯಲ್ಲಿ ತೊಡಗಿರುವುದು ವಿಪರ್ಯಾಸ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಕೂಡಾ ಭರವಸೆ ನೀಡಿದ್ದಾರೆ.