ಮುಂಬೈ: ಕೊರೋನಾ ಪ್ರಕರಣ ಹೆಚ್ಚಿದ ಕಾರಣ ಐಪಿಎಲ್ 14 ಕೂಟವನ್ನು ಮುಂದೂಡಲಾಗಿದೆ. ಐಪಿಎಲ್ ಮುಂದೂಡಿದ ಬಳಿಕ ಬಿಸಿಸಿಐ ಹೇಳಿಕೆ ನೀಡಿದೆ.
									
										
								
																	
ತುರ್ತು ಸಭೆ ನಡೆಸಿ ಐಪಿಎಲ್ ಆಡಳಿತ ಮಂಡಳಿ ಈ ಕೂಟವನ್ನು ಮುಂದೂಡಲು ತೀರ್ಮಾನಿಸಿದೆ. ಇದು ಎಲ್ಲರ ಆರೋಗ್ಯ, ಸುರಕ್ಷತೆಯ ದೃಷ್ಟಿಯಲ್ಲಿ ಕೈಗೊಂಡ ನಿರ್ಧಾರವಾಗಿದೆ. ಈ ಕಠಿಣ ಪರಿಸ್ಥಿತಿಯಲ್ಲೂ ಭಾರತದ ಜನರನ್ನು ಚಿಯರ್ ಅಪ್ ಮಾಡಲು ಪ್ರಯತ್ನಿಸಿದೆವು. ಆದರೆ ಈಗ ಟೂರ್ನಮೆಂಟ್ ಮುಂದೂಡದೇ ಬೇರೆ ದಾರಿಯಿಲ್ಲ ಎಂದು ಬಿಸಿಸಿಐ ಹೇಳಿಕೆ ನೀಡಿದೆ.
									
			
			 
 			
 
 			
			                     
							
							
			        							
								
																	ಕೊರೋನಾ ಸಮಯದಲ್ಲಿ ಸಿನಿಮಾ, ಕಿರುತೆರೆ ಹಾಗೂ ಇತರ ಕ್ರೀಡಾ ಚಟುವಟಿಕೆಗಳು ಬಂದ್ ಆಗಿದ್ದಾಗ ಐಪಿಎಲ್ ಒಂದೇ ಜನರಿಗೆ ಮನರಂಜನೆಯಾಗಿತ್ತು. ಆದರೆ ಈಗ ಅದೂ ಇಲ್ಲವಾಗಿದೆ.