Select Your Language

Notifications

webdunia
webdunia
webdunia
webdunia

ಬೆಡ್ ಬ್ಲಾಕಿಂಗ್ ದಂಧೆ ವಿರುದ್ಧ ನಟಿ ತಾರಾ ಆಕ್ರೋಶ

webdunia
ಬೆಂಗಳೂರು , ಬುಧವಾರ, 5 ಮೇ 2021 (09:47 IST)
ಬೆಂಗಳೂರು: ಬಿಬಿಎಂಪಿಯ ಕೆಲವು ಅಧಿಕಾರಿಗಳು ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದಾರೆ ಎಂಬ ಸಂಸದ ತೇಜಸ್ವಿ ಸೂರ್ಯ ಆರೋಪದ ಬಗ್ಗೆ ನಟಿ, ಬಿಜೆಪಿ ನಾಯಕಿ ತಾರಾ ಪ್ರತಿಕ್ರಿಯಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ತಾರಾ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ವಿಚಾರ, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

‘ಈ ದಂಧೆಯಲ್ಲಿ ತೊಡಗಿದವರ ವಿರುದ್ಧ ನಿರ್ಲಕ್ಷ, ಭ್ರಷ್ಟಾಚಾರ ಪ್ರಕರಣವಲ್ಲ, ಜನರನ್ನು ಕೊಲೆ ಮಾಡಿದ ಪ್ರಕರಣ ದಾಖಲಿಸಬೇಕು. ಇಂತಹ ಒಂದು ದಂಧೆ ನಡೆದಿರುವುದು ನಿಜಕ್ಕೂ ಖೇದಕರ. ಈ ಪ್ರಕರಣವನ್ನು ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಬಲಿಗರನ್ನು ಅಭಿನಂದಿಸುತ್ತೇನೆ. ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ಭರವಸೆಯಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿ ಸರ್ಕಾರದಿಂದ ದೆಹಲಿಯ ಆಟೋ, ಟ್ಯಾಕ್ಸಿ ಚಾಲಕರಿಗೆ 5000 ರೂ. ಕೊಡುಗೆ