Publish Date: Wed, 08 Mar 2023 (13:34 IST)
Updated Date: Wed, 08 Mar 2023 (13:37 IST)
ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಸಾಕಷ್ಟು ತೊಂದರೆ ಆಗುತ್ತಿದೆ. ಅವರು ನಿರಂತರವಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಮುಕ್ತಿ ಸಿಗದಂತಾಗಿದೆ. ಇದರ ಜೊತೆಗೆ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ. ಹೋಳಿ ಸಂದರ್ಭದಲ್ಲಿ ಆತ ನಟಿಗೆ ಲವ್ ಲೆಟರ್ ಬರೆದಿದ್ದಾನೆ. ಈ ವೇಳೆ ಲವ್ ಯೂ ಬೇಬಿ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ. ಒಳ್ಳೆಯ ವ್ಯಕ್ತಿ, ನನ್ನ ಬ್ಯೂಟಿಫುಲ್ ಜಾಕ್ವೆಲಿನ್ಗೆ ಹೋಳಿ ಶುಭಾಶಯ. ಈ ದಿನ ಬಣ್ಣಗಳ ಹಬ್ಬ. ಮರೆಯಾದ ಬಣ್ಣಗಳು 100 ಪಟ್ಟು ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ ಎಂದು ಅವರು ಪತ್ರ ಆರಂಭಿಸಿದ್ದಾರೆ.ಐ ಲವ್ ಯೂ ಮೈ ಬೇಬಿ ಗರ್ಲ್. ಯಾವಾಗಲೂ ನಗುತ್ತಾ ಇರು. ಲವ್ ಯು ಮೈ ಪ್ರಿನ್ಸೆಸ್. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೊಮ್ಮ ನೀನು, ನನ್ನ ಪ್ರೀತಿ ಎಂದು ಪತ್ರದಲ್ಲಿ ಸುಕೇಶ್ ಬರೆದುಕೊಂಡಿದ್ದಾನೆ.